Sports
ಸೆಮಿ ಫೈನಲ್ ಹಣಾಹಣಿಗೆ ಮುಹೂರ್ತ ಫಿಕ್ಸ್.
ವೆಸ್ಟ್ಇಂಡೀಸ್: 2024ರ ಟಿ-20 ವಿಶ್ವಕಪ್ ಹಣಾಹಣಿ ಈಗ ಸೆಮಿ ಫೈನಲ್ ಹಂತಕ್ಕೆ ಬಂದು ನಿಂತಿದೆ. 20 ತಂಡಗಳೊಂದಿಗೆ ಈ ಪಂದ್ಯಾವಳಿ ಪ್ರಾರಂಭವಾಗಿತ್ತು. ಸೆಮಿ ಫೈನಲ್ ಪಂದ್ಯಾವಳಿಗಳ ಆತಿಥ್ಯವನ್ನು ವೆಸ್ಟ್ ಇಂಡೀಸ್ ಕೆರೆಬಿಯನ್ ದ್ವೀಪಗಳ ಸ್ಟೇಡಿಯಂಗಳು ವಹಿಸಿಕೊಂಡಿವೆ. ಸೌತ್ ಆಫ್ರಿಕಾ, ಇಂಗ್ಲೆಂಡ್, ಭಾರತ ಮತ್ತು ಆಫ್ಘಾನಿಸ್ತಾನ ತಂಡಗಳು ಸೆಮಿ ಫೈನಲ್ ನಲ್ಲಿ ಸೆಣಸಾಡಲಿವೆ.
ಇದೇ ಜೂನ್ 27ಕ್ಕೆ ಟಿ20 2024ರ ಸೆಮಿ ಫೈನಲ್ ಪಂದ್ಯಗಳು ನಡೆಯಲಿವೆ. ಮೊದಲನೇ ಸೆಮಿ ಫೈನಲ್ ಪಂದ್ಯ ಸೌತ್ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ನಡೆಯಲಿದೆ. ಇದು ಟ್ರಿನಿಡಾಡ್ – ಟೊಬೊಗೊದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಜರುಗಲಿದೆ. ಇದು ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಲಿದೆ.
ಎರಡನೇ ಸೆಮಿ ಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯಲಿದೆ. ಇದು ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂ ನಲ್ಲಿ, ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಪ್ರಾರಂಭವಾಗಲಿದೆ.