Alma CornerIndia
ಪ್ರಬಲ ಭೂಕಂಪಕ್ಕೆ ತುತ್ತಾದ ತೈವಾನ್.

ತೈಪೆ: ದಕ್ಷಿಣ ಚೀನಾ ಸಮುದ್ರದಲ್ಲಿ ಸ್ಥಿತವಾಗಿರುವ ಪುಟ್ಟ ದ್ವೀಪ ರಾಷ್ಟ್ರ ತೈವಾನ್ ನಲ್ಲಿ ತೀವ್ರ ಸ್ವರೂಪದ ಭೂಕಂಪ ಸಂಭವಿಸಿದೆ. ತೈವಾನ್ ದೇಶದ ಕರಾವಳಿ ಪ್ರದೇಶದಲ್ಲಿ ಇಂದು ಬುಧವಾರ, ಸರಿಸುಮಾರು 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿಯ ಕಟ್ಟಡಗಳು ಉರುಳಿ ಬೀಳುವ ದೃಶ್ಯಗಳು ಕಂಡು ಬಂದಿದೆ. ಆದರೆ ಸಾವು ನೋವುಗಳಂತಹ ಅನಾಹುತಗಳ ಬಗ್ಗೆ ಅಂಕಿಅಂಶಗಳು ಇನ್ನೂ ಲಭ್ಯವಾಗಿಲ್ಲ.
ತೈಪೆಯಲ್ಲಿ ಭೂಮಿಯ 16 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರಬಿಂದು ದಾಖಲಾಗಿದೆ ಎಂದು ತೈವಾನ್ ಹವಾಮಾನ ಇಲಾಖೆ ತಿಳಿಸಿದೆ. ಇದರೊಂದಿಗೆ, ದಕ್ಷಿಣ ಜಪಾನ ಹಾಗೂ ಫಿಲಿಪೈನ್ಸ್ ದ್ವೀಪ ದೇಶಗಳಲ್ಲಿ ಸುನಾಮಿ ಏಳುವ ಸಂಭವವೂ ಇರಬಹುದು ಎಂದು ಎಚ್ಚರಿಕೆ ನೀಡಲಾಗಿದೆ.