CinemaEntertainment
ಕಿರಾತಕ ಚಿತ್ರದ ಖಳನಟ ‘ಡ್ಯಾನಿಯಲ್ ಬಾಲಾಜಿ’ ಇನ್ನಿಲ್ಲ.
ಚೆನ್ನೈ: ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಬಹುಭಾಷಾ ನಟರಾಗಿದ್ದ ಡ್ಯಾನಿಯಲ್ ಬಾಲಾಜಿಯವರು ನಿನ್ನೆ ಮಾರ್ಚ್ 29ರಂದು ಹೃದಯಾಘಾತದಿಂದ ಅಸುನೀಗಿದ್ದಾರೆ.
48 ವರ್ಷ ವಯಸ್ಸಿನ ಡ್ಯಾನಿಯಲ್ ಬಾಲಾಜಿಯವರು 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ತದನಂತರ ಶಿವಾಜಿನಗರ, ಡವ್, ಬೆಂಗಳೂರು ಅಂಡರ್ವರ್ಲ್ಡ್ ಚಿತ್ರಗಳಲ್ಲಿ ಸಹ ಅಭಿನಯಿಸಿ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದರು.
ಮಾರ್ಚ್ 29ಕ್ಕೆ, ಡ್ಯಾನಿಯಲ್ ಬಾಲಾಜಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಇದಾದ ನಂತರ ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಾಜಿಯವರು ಕೊನೆಯುಸಿರೆಳೆದಿದ್ದಾರೆ.