Sports
ಅತಿಯಾದ ನಿದ್ರೆಯಿಂದ ಭಾರತದೊಂದಿಗಿನ ಪಂದ್ಯವನ್ನೇ ಮರೆತ ಈ ಆಟಗಾರ.

ಢಾಕಾ: ಕೇಳಲು ಹಾಸ್ಯಾಸ್ಪದ ಎನ್ನಿಸಿದರೂ ಇದು ಸತ್ಯ. ಬಾಂಗ್ಲಾದೇಶ ಕ್ರಿಕೆಟ್ ತಂಡದ ಉಪ ನಾಯಕ ಹಾಗೂ ಬೌಲರ್ ಆದಂತಹ ತಸ್ಕಿನ್ ಅಹ್ಮದ್ ಅವರು ತಮ್ಮ ಅತಿಯಾದ ನಿದ್ದೆ ಹಾಗೂ ತಂಡದವರ ಸಾಲು ಸಾಲು ಪೋನ್ ಕರೆಗಳಿಗೆ ಉತ್ತರಿಸದೆ, ತಂಡದ ಬಸ್ಸನ್ನು ತಪ್ಪಿಸಿಕೊಂಡು ಪಂದ್ಯದಲ್ಲಿ ಆಡುವ ಭಾಗ್ಯವನ್ನು ಕಳೆದುಕೊಂಡಿದ್ದರು.
ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೂಪರ್-8 ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್ ತಂಡಗಳು ಎದುರಾಗಿದ್ದವು. ಈ ಪಂದ್ಯದಲ್ಲಿ ಬಾಂಗ್ಲಾ ಕೇವಲ ಎರಡು ಪಾಸ್ಟ್ ಬೌಲರ್ ಗಳನ್ನು ಕಣಕ್ಕೆ ಇಳಿಸಿತ್ತು. ಭಾರತದ ವಿರುದ್ಧದ ಈ ನಡೆಗೆ ಅಂದು ಕ್ರಿಕೆಟ್ ವಿಮರ್ಶಕರು ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಆದರೆ ಅದರ ಹಿಂದಿನ ಸತ್ಯ ಈಗ ತಿಳಿದು ಬಂದಿದೆ.
ತಸ್ಕಿನ್ ಅಹ್ಮದ್ ಅವರು ತಮ್ಮ ಈ ನಿರ್ಲಕ್ಷದ ನಡೆಗೆ, ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಕ್ಷಮೆಯನ್ನು ಕೇಳಿದ್ದಾರೆ. ಇದರ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಪ್ರಶ್ನೆಗಳನ್ನು ಎತ್ತುತ್ತಿದೆ.