Sports
2024ರ ಐಪಿಎಲ್ ವಿಜೇತ ತಂಡ: ಕೆಕೆಆರ್.
ಚೆನ್ನೈ: 2024ರ ಐಪಿಎಲ್ ಆವೃತ್ತಿ ನಿನ್ನೆ ಮುಕ್ತಾಯಗೊಂಡಿದೆ. ಈ ಬಾರಿ ಯಾರಿಗೆ ಕಪ್ಪು ಒಲಿಯುತ್ತದೆ ಎಂಬ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ಫೈನಾನ್ಸ್ ನಲ್ಲಿ ಎದುರಾದ ಎಸ್ಆರ್‌ಎಚ್ ಹಾಗೂ ಕೆಕೆಆರ್ ತಂಡ ತಮ್ಮ ಗೆಲುವಿಗಾಗಿ ರಣತಂತ್ರವನ್ನು ರೂಪಿಸಿದ್ದವು.
ಆದರೆ ಸನ್ ರೈಸರ್ಸ್ ಹೈದರಾಬಾದ್ ಅವರ ಲೆಕ್ಕಾಚಾರ ಮೊದಲ ಇನ್ನಿಂಗ್ಸಿನಲ್ಲಿ ಬುಡಮೇಲು ಆಯಿತು. 18.3 ಓವರ್ ಗಳಲ್ಲಿ ಕೇವಲ 113 ರನ್ ಕಲೆ ಹಾಕಲು ಅಷ್ಟೇ ಶಕ್ತವಾಯಿತು. ಐಪಿಎಲ್ ನ ಕೊನೆಯ ಹಂತದಲ್ಲಿ ಈ ರೀತಿಯ ನೀರಸ ಪ್ರದರ್ಶನವನ್ನು ನೀಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಅಭಿಮಾನಿಗಳಿಗೆ ನಿರಾಸೆಯನ್ನು ಉಂಟು ಮಾಡಿತು.
ಈ ಮೊತ್ತವನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕೇವಲ 10.3 ಓವರ್ ಗಳಲ್ಲಿ, ಎರಡು ವಿಕೆಟುಗಳ ನಷ್ಟಕ್ಕೆ ಜಯಭೇರಿ ಬಾರಿಸಿದರು. ಈ ಮೂಲಕ 2024ರ 17ನೇ ಆವೃತ್ತಿಯ ಐಪಿಎಲ್‌ನ ವಿಜೇತರಾಗಿ ಹೊರಹೊಮ್ಮಿದ್ದಾರೆ. ಇದು ಕೆಕೆಆರ್ ತಂಡದ ಮೂರನೇ ಐಪಿಎಲ್ ಟ್ರೋಫಿ ಗೆಲುವಾಗಿದೆ.