ಅವರೆಕಾಯಿಯ ರುಚಿ ಬಲ್ಲವರೇ ಬಲ್ಲರು..!

ಅವರೆಕಾಯಿಯನ್ನು ಸಾಮಾನ್ಯವಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಬೆಳೆಯಲಾಗುತ್ತದೆ. ಜುಲೈ ತಿಂಗಳಿನಲ್ಲಿ ಕಾಯಿಗಳನ್ನು ಬಿಡುತ್ತದೆ. ಆದರೆ ಕರ್ನಾಟಕದಲ್ಲಿ ಇದನ್ನು ಸುಗ್ಗಿಗೆ ಮೊದಲು ಬೆಳೆಯುತ್ತಾರೆ.
ಅವರೆಕಾಯಿ ವಾಸನೆ ಮತ್ತು ಅವರೆಕಾಯಿ ರುಚಿಗೆ ಮನಸೋತಿದ್ದಾರೆ. ಅವರೆಕಾಳಿನಿಂದ ಸಿಗುವ ಕೆಲವೊಂದು ಆರೋಗ್ಯ ಲಾಭಗಳು ಯಾವುದೇ ತರಕಾರಿಯಲ್ಲಿ ಸಿಗುವುದಿಲ್ಲ. ಅವರೆಕಾಳಿನಲ್ಲಿ ಮಾಂಸಕ್ಕಿಂತಲೂ ಹೆಚ್ಚಿನ ಪ್ರೋಟೀನ್ ಇದೆ.ಅವರೆಕಾಳು ಯಾವುದೇ ಹಣ್ಣು ಮತ್ತು ತರಕಾರಿಗಿಂತ ಕಡಿಮೆ ಏನಿಲ್ಲ. ಇದರಲ್ಲಿ ಕ್ಯಾಲೋರಿಗಳು ದೇಹದ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಅವರೆಕಾಳುವಿನಲ್ಲಿ ವಿಟಿಮಿನ್ ಬಿಎಲ್ ಅಥವಾ ಧಿಯಮಿನ್, ಕಬ್ಬಿಣಾಂಶ ತಾಮ್ರ , ರಂಜಕ, ಪೊಟ್ಯಾಶಿಯಂ, ಮತ್ತು ಮ್ಯೆಗ್ನಿಶಿಯಂಗಳು ಇರುತ್ತದೆ. ಪೋಷಕಾಂಶಗಳನ್ನು ಒಳಗೊಂಡಿರುವ ಅವರೆಕಾಯಿಯು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಕರಿಸುತ್ತ
ಅವರೆಕಾಳುಗಳಿಂದ ಅನೇಕ ಬಗೆಯ ತಿಂಡಿ ತಿನಿಸುಗಳನ್ನು ಮಾಡಬಹುದು. ಅವರೆಕಾಳು ನಿಪ್ಪಟ್ಟು, ಅವರೆಕಾಳಿನ ಕೋಡುಬಳೆ , ಅವರೆಕಾಳುಉಸಲಿ ಅವರೆಕಾಳು ಹುಳಿ, ಅವರೆಕಾಳು ಬಸ್ಸಾರು,ಇದ್‌ಕಿನ ಬೇಳೆ ಸಾರು, ಅವರೆಕಾಳು ಮಸಾಲೆವಡೆ, ಅವರೆಕಾಳು ಉಪ್ಪಿಟ್ಟು, ಅವರೆಬೇಳೆಯಿಂದ ಬನ್, ಹೋಳಿಗೆ, ಚಿತ್ರಾನ್ನ, ಅಷ್ಷೇ ಅಲ್ಲದೆ ಅವರೆಕಾಳು ಜಾಮುನನ್ನು ಇನ್ನೂ ಇತ್ಯಾದಿಗಳನ್ನು ಮಾಡಬಹುದು. ಜನರು ಅವರೆಕಾಯಿಗಾಗೀಯೇ ಕಾಯುತ್ತಿರುತ್ತಾರೆ. ಅವರೆಕಾಳಿನಲ್ಲಿ ಅನೇಕ ಬಗೆಯ ಆಹಾರಗಳನ್ನು ಮಾಡಬಹುದು. ಅದರಲ್ಲಿ ವಿಶೇಷವಾದ ಅಡುಗೆಗಳು ಎಂದರೆ.ಅವರೆಕಾಳುಹುಳಿ, ಕಾಳು ಗೊಜ್ಜು, ಇದುಕಿನ ಬೇಳೆ ಸಾರು, ಮತ್ತು ಹಿತಕಿದ ಅವರೆಬೇಳೆ ಚಿಕನ್ ಸಾರು, ಎಂದರೆ ಬಾಯಲ್ಲಿ ನೀರೂರುತ್ತದೆ. ಮತ್ತು ಅವರೆಕಾಯಿಯನ್ನು ಒಣಗಿಸಿ ಅವರೆಕಾಳಾಗಿ ಮಾಡುತ್ತಾರೆ.

ಅವರೆಕಾಳು ಉಪ್ಪಿಟ್ಟು ಮಾಡುವ ವಿಧಾನ ಅವರೆಕಾಯಿ ಉಪ್ಪಿಟ್ಟು ಕಡಾಯಿಲೆಯಲ್ಲಿ ರವೆಯವನ್ನು ಕೊಂಚ ಕೆಂಪಗಾಗುವವರೆಗೆ ಹುರಿಯಬೇಕು. ನಂತರ ಅವರೆಕಾಯಿಯನ್ನು ಮೃದುವಾಗುವವರೆಗೆ ಕುದಿಯುವ ನೀರಿನಲ್ಲಿ ಉಪ್ಪಿನೊಂದಿಗೆ ಬೇಯಿಸಿ ಮತ್ತು ಪಕ್ಕದಲ್ಲಿ ಇಡಬೇಕು. ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೇರಿಗೆ, ಉದ್ದಿನ ಬೇಳೆ, ಕರಿಬೇವು,ಹಸಿಮೆಣಸಿನಕಾಯಿ ಸೇರಿಸಿ 30 ಸೆಕೆಂಡುಗಳ ಕಾಲ ಹುರಿಯಬೇಕು. ನಂತರ ಒಂದು ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಬೇಯಿಸಿದ ಅವರೆಕಾಯಿ,ಉಪ್ಪು,ಅರಿಶಿನ ಪುಡಿ ಸೇರಿಸಿ 2-3 ನಿಮಿಷ ಹುರಿಯಬೇಕು. ನಂತರ ಸ್ವಲ್ಪ ನೀರನ್ನು ಸೇರಿಸಿ ನೀರು ಕುದಿಯಲು ಪ್ರಾರಂಭಿಸಿದ ನಂತರ ಹುರಿದ ರವೆಯನ್ನು ಸೇರಿಸಬೇಕು. ಸುಮಾರು 2-3 ನಿಮಿಷಗಳ ಕಾಲ ಮುಚ್ಚಿ ಬೇಯಲು ಬಿಡಬೇಕು. ನಂತರ ನಿಂಬೆ ರಸ ,ಕೊತ್ತಂಬರಿ ಸೊಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಒಲೆಯಿಂದ ಕೆಳಗಿಳಿಸಿ ಬಿಸಿ ಬಿಸಿಯಾದ ಅವರೆಕಾಳು ಉಪ್ಪಿಟ್ಟು ಸಿದ್ದವಾಗಿರುತ್ತದೆ.
ಸಂಗೀತಾ ಎಸ್
ಆಲ್ಮಾ ಸ್ಕೂಲ್ ವಿದ್ಯಾರ್ಥಿನಿ