Alma Corner

ವಿಸಾ ನಿಯಮ ಬದಲಾವಣೆ ಈಗ 30 ದಿನಗಳು ಮಾತ್ರ….

ಥಾಯ್ಲೆಂಡ್ ಅಂದರೆ ಯಾರಿಗ ಗೊತ್ತಿಲ್ಲಾ ಹೇಳಿ ಥಾಯ್ಲೆಂಡ್ ತನ್ನ ನೈಸರ್ಗಿಕ ಸೌಂದರ್ಯ ಐತಿಹಾಸಿಕ ಸ್ಮಾರಕಗಳು, ಸುಂದರವಾದ ಸಮುದ್ರಗಳು ಹಾಗೂ ತನ್ನ ಆಕರ್ಷಕ ಪ್ರವಾಸಿ ತಾಣಗಳಿಂದ ಜಗತ್ತಿನಾದ್ಯಂತ ಪ್ರಸಿದ್ಧಿಯನ್ನ ಪಡೆದುಕೊಂಡಿರುವ ಮತ್ತು ಪ್ರವಾಸ ಪ್ರೀಯರ ನೆಚ್ಚಿನ ದೇಶ ಇದಾಗಿದೆ.  ಥಾಯ್ಲೆಂಡ್‌ʼಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಬೇಟಿ ನಿಡುತ್ತಾರೆ ಈ ಹಿನ್ನಲೆಯಲ್ಲಿ ಥಾಯ್ಲೆಂಡ್ ತನ್ನ ದೇಶದ ಪ್ರವಾಸೊದ್ಯಮ ಹಾಗೂ ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಹಾಗೂ 2024 ರಲ್ಲಿ 40 ಮಿಲಿಯನ್‌ ಪ್ರವಾಸಿಗರ ಗುರಿ ಇಟ್ಟುಕೊಂಡು ಹೊರ ದೇಶದ ಪ್ರವಾಸಿಗರರಿಗೆ ಜುಲೈ 15 2024 ರಂದು 60 ದಿನಗಳ ವಿಸಾ ವಿನಾಯತಿಯನ್ನ ಭಾರತ, ಆಸ್ಟ್ರೇಲಿಯಾ, ಜಪಾನ, ಮಲೆಶಿಯಾ, ಚೀನಾ, ರಷ್ಯಾ ಸೇರಿದಂತೆ ಒಟ್ಟು 93 ದೇಶಗಳಿಗೆ ಜಾರಿಗೆ ತಂದಿತ್ತು ಆದರೆ ಮತ್ತೆ ಈಗ 60 ದಿನಗಳ ವಿಸಾವನ್ನು 30 ದಿನಗಳಿಗೆ ಕಡಿವಾಣ ಮಾಡಲು ಯೊಚಿಸಿದೆ

ಹೀಗಾದರೆ ದೇಶದ ಆರ್ಥಿಕತೆ ಹೆಚ್ಚಿಸಲು ವಿಸಾ ವಿನಾಯತಿ ಕೊಟ್ಟ ದೇಶ ಮತ್ತೆ ಯಾಕೆ ಬದಲಾವಣೆಯನ್ನ ತಂದಿದೆ..? ಇದರ ಹಿಂದಿನ ಕಾರಣ ಎನು..? ಇದೆಲ್ಲಾ ನೊಡೊದಾದ್ರೆ  ಜುಲೈ 15 2024 ರಲ್ಲಿ ಮಾಡಿದ ವಿಸಾ ವಿನಾಯತಿಯಲ್ಲಿ ಪ್ರವಾಸಿಗರು ಅಥವಾ ವ್ಯಾಪಾರಸ್ಥರು 60 ದಿನಗಳ ವರೆಗೆ ತಮ್ಮ ಸಮಯವನ್ನು ಕಳೆಯಬಹುದಾಗಿತ್ತು ಹಾಗೂ ಇನ್ನು 30 ಹೆಚ್ಚಿನ ದಿನಗಳ ವಿಸಾವನ್ನು ವಲಸೆ  ಕಛೇರಿಯಲ್ಲಿ ವಿಸ್ತರಿಸಲುಬಹುದಾಗಿತ್ತು. ಈ ಕಾರಣ ಜನವರಿ 2025 ರಿಂದ ಮಾರ್ಚ್ 2025 ರ ಮಧ್ಯೆ 7.66 ಮಿಲಿಯನ್‌ ವಿದೇಶಿ ಪ್ರವಾಸಿಗರನ್ನು ಹೊಂದಿದ್ದು ಥಾಯ್ಲೆಂಡ್ ಪ್ರವಾಸೊದ್ಯಮದಲ್ಲಿ ಹಾಗೂ ಆರ್ಥಿಕತೆಯಲ್ಲಿ ಒಳ್ಳೆಯ ಆದಾಯವು ಇತ್ತು ಆದರೆ ದೇಶದಲ್ಲಿ ಅಕ್ರಮ ವ್ಯವಹಾರದಲ್ಲಿ ತೊಡಗಿರುವ ವಿದೇಶಿಯವರ ಸಂಖ್ಯೆ ಹಾಗೂ ಅಕ್ರಮ ವ್ಯವಹಾರದಿಂದ ದೇಶಕ್ಕೆ ಆಗುವ ತೊಂದರೆಗಳ ಬಗ್ಗೆ ಥಾಯ್ಲೆಂಡ್ ಪ್ರವಾಸ ಆಯೋಜಕರು ಕಳವಳ ವ್ಯಕ್ತಪಡಿಸಿದ್ದರು. ಥಾಯ್ಲೆಂಡ್‌’ನಲ್ಲಿ ಹೆಚ್ಚುತ್ತಿರುವ ಅಕ್ರಮ ವಿದೇಶಿ ಅಥಿತಿಗಳು ಮತ್ತು ಅಕ್ರಮ ಬಾಡಿಗೆದಾರರು ನಕಲಿ ಗುರುತಿನ ಚೀಟಿಯನ್ನು ಬಳಸಿ ಅಕ್ರಮವಾಗಿ ನೆಲೆಸಿರುವ ಸಂಖ್ಯೆಗಳು ಏರಿಕೆಯನ್ನ ಕಂಡವು ಇದರಿಂದ ದೇಶಕ್ಕೆ ಆರ್ಥಿಕ ನಷ್ಟ ಮತ್ತು ವಿಸಾ ವಿನಾಯತಿ ಯೋಜನೆಯನ್ನು ಅನಿಯಮಿತ ಅಥವಾ ಅಕ್ರಮ ವ್ಯವಹಾರಗಳು ದುರುಪಯೋಗಪಡೆಸಿಕೊಳ್ಳುವ ಅಪಾಯವನ್ನು ಸುಧಾರಿಸುವ ಪ್ರಯತ್ನದಲ್ಲಿ ಥಾಯ್ಲೆಂಡ್ ಸರ್ಕಾರ 60 ದಿನಗಳ ಪ್ರವಾಸಿ ವಿಸಾವನ್ನು 30 ದಿನಗಳಿಗೆ ಕಡಿತಗೋಳಿಸಲಿದೆ ಈ ಬಗ್ಗೆ ಥಾಯ್ಲೆಂಡ್ ಪ್ರವಾಸೊದ್ಯಮ ಇಲಾಖೆ ಹಾಗೂ ಕ್ರೀಡಾ ಸಚೀವ ಸೊರಾವೋಂಗ್‌ ಥಯೆಂಥೊಂಗ್ ಮತ್ತು ವಿದೇಶಾಂಗ ಸಚಿವಾಲಯವು ತಿಳಿಸಿದ್ದಾರೆ.  ಈ ವಿಷಯದ ಬಗ್ಗೆ ಇತ್ತಿಚೀನ ವಾರಗಳಲ್ಲಿ‌ ಸಭೆ ನಡೆಸಲು ಕೂಡ ಚರ್ಚಿಸಲಾಗಿದೆ.     

Show More

Related Articles

Leave a Reply

Your email address will not be published. Required fields are marked *

Back to top button