

ದಿವಂಗತ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ನಿಧನದ ನಂತರ ಅಧಿಕಾರದ ಚುಕ್ಕಾಣಿ ಹಿಡಿದಂತಹ ಮೂರನೇ ಚಾರ್ಲ್ಸ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಬಂಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ.
ಮೂರನೇ ಚಾರ್ಲ್ಸ್ ಅವರು ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ, ಆದರೆ ಖಾಸಗಿ ಸಭೆ ಸೇರಿದಂತೆ ಇನ್ನಿತರ ಅಧಿಕೃತ ಕೆಲಸವನ್ನು ಮುಂದುವರಿಸುತ್ತಾರೆ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.