Politics
ಯಕ್ಷಗಾನ ಅಕಾಡೆಮಿಗೆ ಹೆಚ್ಚುವರಿ ಅನುದಾನ ಮೀಸಲಿಟ್ಟ ರಾಜ್ಯ ಸರ್ಕಾರ.
ಬೆಂಗಳೂರು: ಕರಾವಳಿ ಮೂಲದ ಕಲೆ ಯಕ್ಷಗಾನ ಇಂದು ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿದೆ. ಈಗ ರಾಜ್ಯ ಸರ್ಕಾರ ಯಕ್ಷಗಾನ ಅಕಾಡೆಮಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಮುಂದಾಗಿದೆ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಲು ಈ ನಿರ್ಧಾರ ಮಹತ್ತರವಾಗಿದೆ. ಇದರಿಂದ ರಾಜ್ಯ ಸರ್ಕಾರ ಕರ್ನಾಟಕದ ಮಣ್ಣಿನ ಕಲೆಗಳನ್ನು ಪೋಷಿಸುವಲ್ಲಿ ಹಿಂದೆ ಸರಿದಿಲ್ಲ ಎಂದು ತಿಳಿಸಿದೆ.
ಇಂದು ನಡೆದ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, “ಕರ್ನಾಟಕ ಯಕ್ಷಗಾನ ಅಕಾಡೆಮಿಯನ್ನು ಯಕ್ಷಗಾನ ಅಭಿವೃದ್ಧಿ ಪ್ರಾಧಿಕಾರ ಮಾಡುವ ಬದಲು ಹೆಚ್ಚುವರಿ ಅನುದಾನ ಮೀಸಲಿಟ್ಟು, ಯಕ್ಷಗಾನ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಲು ಸರ್ಕಾರ ಸಿದ್ಧವಾಗಿದೆ.” ಎಂದರು.
ಕನ್ನಡ ನಾಡು ಹಲವು ಕಲೆ ಸಂಸ್ಕೃತಿಯ ತವರೂರು. ರಾಜ್ಯ ಸರ್ಕಾರದ ಕಾಳಜಿಯಿಂದ ಮಾತ್ರ ಅಳಿವಿನ ಅಂಚಿನಲ್ಲಿರುವ ನೂರಾರು ಕಲೆಗಳನ್ನು ಇಂದು ಪೋಷಿಸಿ ಬೆಳೆಸಬಹುದು.