ಲೀಕ್ ಆಯ್ತು ಈ ನಟಿಯ ಪೋಟೋ: ಸಾಮಾಜಿಕ ಜಾಲತಾಣದಲ್ಲಿ ಏನೆಂದಿದ್ದಾರೆ ಪ್ರಭಾಸ್ ನಾಯಕಿ..?!
ಹೈದರಾಬಾದ್: ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ‘ದ ರಾಜಾ ಸಾಬ್’ ಶೂಟಿಂಗ್ ಶೀಘ್ರಗತಿಯಲ್ಲಿದ್ದು, 80% ಕೆಲಸ ಪೂರ್ಣಗೊಂಡಿದೆ. ಆದರೆ, ಇತ್ತೀಚೆಗೆ ನಟಿ ನಿಧಿ ಅಗರವಾಲ್ ಅವರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ‘ದ ರಾಜಾ ಸಾಬ್’ ಚಿತ್ರದ ಸೆಟ್‌ನಿಂದ ಲೀಕ್ ಆಗಿದೆ ಎಂಬುದಾಗಿ ಅಭಿಪ್ರಾಯ ವ್ಯಕ್ತವಾಯಿತು. ಈ ಕುರಿತು ನಿಧಿ ಅಗರವಾಲ್ ಸ್ಪಷ್ಟನೆ ನೀಡಿದ್ದಾರೆ.
ನಿಧಿ ಅಗರವಾಲ್ ಲುಕ್ ವಿವಾದಕ್ಕೆ ಸ್ಪಷ್ಟನೆ:
ನಿಧಿ ಅವರು “ನಮಸ್ಕಾರ ಸ್ನೇಹಿತರೆ! ಇದು ‘ದ ರಾಜಾ ಸಾಬ್’ ಚಿತ್ರದ ಫೋಟೋ ಅಲ್ಲ. ಇದು ನಾನು ಮಾಡಿರುವ ಜಾಹೀರಾತು ಚಿತ್ರೀಕರಣದ ಫೋಟೋ” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. “ನಮ್ಮ ಚಿತ್ರದ ಕುರಿತು ಶೀಘ್ರದಲ್ಲೇ ತಾಜಾ ಸುದ್ದಿಗಳು ನೀಡುತ್ತೇವೆ. ಕಾದು ನೋಡಿ!” ಎಂದು ಅವರು ಹೇಳಿದ್ದಾರೆ.
ಈ ಫೋಟೋದಲ್ಲಿ ನಿಧಿ ಅವರು ಆಕರ್ಷಕ ಉಡುಪಿನಲ್ಲಿ ಮಿಂಚುತ್ತಿದ್ದಾರೆ. ಚಿತ್ರ ‘ದ ರಾಜಾ ಸಾಬ್’ ಸೆಟ್‌ನಿಂದ ಎಂದು ಅಭಿಮಾನಿಗಳು ಊಹಿಸಿದರೂ, ನಿಧಿ ಈ ವದಂತಿಯನ್ನು ತಳ್ಳಿಹಾಕಿದ್ದಾರೆ.
‘ದ ರಾಜಾ ಸಾಬ್’:
ಪ್ರಭಾಸ್ ಅವರ ‘ಮಾಸಿ’ ಲುಕ್ ಮತ್ತು ಭರ್ಜರಿ ಮನರಂಜನೆಯೊಂದಿಗೆ ‘ದ ರಾಜಾ ಸಾಬ್’ ಸಿನಿಮಾ ಎಪ್ರಿಲ್ 2025ರಲ್ಲಿ ಬಿಡುಗಡೆಯಾಗಲಿದೆ. ಮಾರುತಿ ನಿರ್ದೇಶನದ ಈ ಚಿತ್ರದಲ್ಲಿ ಮಾಲವಿಕಾ ಮೋಹನನ್, ರಿದ್ಧಿ ಕುಮಾರ್, ಹಾಗೂ ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಂಟರ್ಟೈನ್ಮೆಂಟ್ ಗ್ಯಾರಂಟಿ:
ಮಾರುತಿ ಅವರು ತಮ್ಮ ಹಾಸ್ಯಭರಿತ ಚಿತ್ರಗಳಾದ ‘ಪ್ರತಿ ರೋಜು ಪಾಂಡಗೆ’, ‘ಪ್ರೇಮ ಕಥಾ ಚಿತ್ರಂ’, ಮತ್ತು ‘ಮಹಾನುಬಾವುಡು’ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ‘ದ ರಾಜಾ ಸಾಬ್’ ಹಾರರ್ ಕಾಮಿಡಿ ಶೈಲಿಯ ಮತ್ತೊಂದು ಅದ್ಭುತ ಪ್ರಯತ್ನವಾಗುವ ನಿರೀಕ್ಷೆಯಿದೆ.