CinemaEntertainment
ಇದು ಕಾನೂನು ಸುವ್ಯವಸ್ಥೆ ಕುರಿತ ಚಿತ್ರ: ಫೆಬ್ರವರಿ 14ಕ್ಕೆ ತೆರೆಗೆ ಬರ್ತಿದೆ ‘ಜಸ್ಟಿಸ್’!

ಬೆಂಗಳೂರು: ಕಾನೂನು ಸುವ್ಯವಸ್ಥೆಯ ಕುರಿತ “ಜಸ್ಟಿಸ್” ಸಿನಿಮಾ ಫೆಬ್ರವರಿ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ! ನ್ಯಾಯಕ್ಕೆ ವಂಚನೆಯಾಗುತ್ತಿರುವುದು ಹೇಗೆ? ಕಾನೂನಿನ ಲೂಪ್‌ಹೋಲ್‌ಗಳು ಹೇಗೆ ಅಪರಾಧಿಗಳಿಗೆ ಲಾಭಕರವಾಗುತ್ತಿದೆ? ಈ ಪ್ರಶ್ನೆಗಳಿಗೆ ಉತ್ತರ ನೀಡುವ ಹೈವೋಲ್ಟೇಜ್ ಕಥಾಹಂದರ ಇದು!
ಸಿನಿಮಾದ ಕತೆ ಏನಿದೆ?
- ಪೆರೋಲ್‌ನಲ್ಲಿ ಬಿಡುಗಡೆಯಾದ ಅಪರಾಧಿ ಮತ್ತೆ ಮತ್ತೆ ಹಿಂಸಾತ್ಮಕ ಕೃತ್ಯ ಎಸಗುತ್ತಾನೆ!
- ಕಾನೂನನ್ನೇ ವಂಚಿಸುತ್ತಾ, ನ್ಯಾಯಕ್ಕೇ ಮಣ್ಣು ಮುಕ್ಕಿಸುತ್ತಾನೆ!
- ಅವನ ಹಿಂದಿನ ಜೀವನದ ಅಮಾನವೀಯ ಸಂಗತಿಗಳು ಅಚ್ಚರಿಯ ಸತ್ಯ ಬಹಿರಂಗಪಡಿಸುತ್ತವೆ!
- ಮಹಿಳಾ ಸಬಲೀಕರಣ ಮತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಅಗತ್ಯವೆಂದು ಸಾರುವ ಕಥೆ ಇದಾಗಿದೆ.
ಅರೋನಾ ಕಾರ್ತೀಕ್: ಚಿತ್ರದ ಹಿಂದಿರುವ ಶಕ್ತಿ.
- ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ – ಅರೋನಾ ಕಾರ್ತೀಕ್ ವೆಂಕಟೇಶ್
- ಛಾಯಾಗ್ರಹಣ – ಮೂಸೂರು ಸ್ವಾಮಿ
- ಸಂಕಲನ – ಭಾರ್ಗವ್
- ಸಾಹಸ – ಸುಪ್ರೀಂ ಸುಬ್ಬು, ಮಾಗಡಿ ಮಾರುತಿ
ಪ್ರಮುಖ ತಾರಾಗಣ:
- ಸರ್ಕಾರ್ ಸಾಹಿಲ್ (ನಾಯಕ)
- ರಿಯಾ ಭಾಸ್ಕರ್, ಚೇತನ್ ಕೃಷ್ಣ, ರಿವ್ಯೂ ನವಾಜ್
- ಗಣೇಶ್ ರಾವ್, ಸುರೇಶ್ ಬಾಬು, ಟಿಕ್‌ಟಾಕ್ ನಾಸಿರ್
ಈ ಸೋಶಿಯಲ್-ಥ್ರಿಲ್ಲರ್ ಸಿನಿಮಾ ಕಾನೂನು ವ್ಯವಸ್ಥೆಯ ಅಂಧಕಾರವನ್ನು ಬಯಲಿಗೆಳೆಯಲಿದೆ!