ಬಲೂಚಿಸ್ತಾನ್ ಸ್ವಾತಂತ್ರ್ಯ ಸಂಗ್ರಾಮ !

ಪಾಕಿಸ್ತಾನದಿಂದ ಬೇರ್ಪಡಲು ಬಲೂಚ್ ಪ್ರಾಂತ್ಯ ಸಿದ್ಧವಾಗಿದೆ. ನೂರಾರು ವರ್ಷಗಳಿಂದ ಸ್ವಾತಂತ್ರ ಪಡೆಯಲು ಹೋರಾಡುತ್ತಿರುವ ಬಲೂಚಿಸ್ತಾನಿಗಳ ಹೋರಾಟ ಈಗ ತೀವ್ರ ಸ್ವರೂಪ ಪಡೆದಿದೆ. ಮಾರ್ಚ್ 11 ರ ಮಂಗಳವಾರದಂದು ಕ್ವೆಟ್ಟಾದಿಂದ ಪೇಶಾವರಕ್ಕೆ ಹೊರಟ್ಟಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಬಲೂಚ್ ಬಂಡುಕೋರರು ಹೈಜಾಕ್ ಮಾಡಿದ್ದರು. ಈ ರೈಲಿನಲ್ಲಿ ಸುಮಾರು 450 ರಿಂದ 500 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ರೈಲು ಹೊರಡುವ ಈ ಪ್ರದೇಶ ಸುರಂಗ ಮಾರ್ಗಗಳಿಂದ ಕೂಡಿದ್ದು ರೈಲು ನಿಧಾನವಾಗಿ ಚಲಿಸುತ್ತದೆ, ಇದೆ ಸಮಯವನ್ನು ಬಳಿಸಿಕೊಂಡು ಬಂಡುಕೊರರು ರೈಲ್ವೆ ಹಳಿಯಲ್ಲಿ ಬಾಂಬ್ ಸ್ಪೋಟಿಸಿ ಸಂಪೂರ್ಣ ರೈಲನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಪಾಕ್ ಸೇನೆ ಚೀನಾದೊಂದಿಗೆ ಜಂಟಿಯಾಗಿ ಪ್ರಯಾಣಿಕರನ್ನು ರಕ್ಷಿಸಲು ಮುಂದಾಗಿದೆ. ಬಲೂಚ್ ಬಂಡುಕೋರರು ರೈಲಿನಲಿದ್ದ ಪ್ರಯಾಣಿಕರನ್ನು ಸೇರಿದಂತೆ ರಕ್ಷಣೆಗೆ ಬಂದ ಪಾಕ್ ಸೈನಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿತ್ತು. ಈ ಕುರಿತು ಸೇನೆ ನಮ್ಮ ವಿರುದ್ಧ ಹೋರಾಡಲು ಬಂದರೆ ಎಲ್ಲಾ ಪ್ರಯಾಣಿಕರನ್ನು ಹತ್ಯೆ ಮಾಡಲಾಗುವುದು ಎಂದು ಬಲೂಚ್ ಬಂಡುಕೋರರು ಬೆದರಿಕೆ ಹಾಕಿದ್ದರು. ರಾತ್ರಿ ಪೂರ್ತಿ ಪ್ರಯಾಣಿಕರು ಜೀವ ಭಯದಲ್ಲೆ ಕುಳಿತಿದ್ದರು. ಪ್ರಯಾಣಿಕರ ರಕ್ಷಣೆಗೆ ಬಂದಿದ್ದ 182 ಭದ್ರತಾ ಸಿಬಂದ್ದಿಯನ್ನು ಬಂಡುಕೊರರು ವಶದಲಿಟ್ಟುಕೊಂಡಿದ್ದರು.

ಸತತ 30 ಗಂಟೆಗಳ ಕಾಲ ಜಂಟಿ ಕಾರ್ಯಚರಣೆ ನಡೆಸಿ 30 ಬಲೂಚ್ ಬಂಡುಕೋರರನ್ನ ಹತ್ಯೆ ಮಾಡಲಾಗಿದೆ, ಉಗ್ರರ ವಶದಲಿದ್ದ 340ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ, ಈ ಕಾರ್ಯಚರಣೆಯಲ್ಲಿ ಪಾಕಿಸ್ತಾನದ 27 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಪಾಕ್ ಸೇನೆ ಮಾಹಿತಿಯನ್ನು ಹಂಚಿಕೊಂಡಿದೆ. ಆದರೆ ಪಾಕಿಸ್ತಾನದ ಮಾಜಿ ಸಂಸದ ಖಾದಿರ್ ಬಲೂಚ್ ” ಬಂಡುಕೋರರ ವಿರುದ್ಧ ಪ್ರಯಾಣಿಕರ ರಕ್ಷಣಾ ಕಾರ್ಯಚರಣೆಗೆ ತೆರಳಿದ್ದ ಪಾಕ್‌ನ 150 ಸೈನಿಕರನ್ನು ಹತ್ಯೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಅಖಂಡ ಭಾರತದಿಂದ ಪಾಕಿಸ್ತಾನ ಬೇರ್ಪಟ್ಟಾಗಿನಿಂದಲೂ ಬಲೂಚಿಸ್ತಾನದ ಸ್ವಾತಂತ್ರದ ಹೋರಾಟ ಬೂದಿ ಮುಚ್ಚಿದ ಕೆಂಡದಂತೆಯೆ ಇದೆ. ಆಗಿನಿಂದಲೂ ಬಲೂಚಿಗಳ ಸ್ವಾತಂತ್ರ್ಯದ ಕೂಗು ಕೇಳುತ್ತಲೆ ಇದೆ ಆದರೆ ಪಾಕಿಸ್ತಾನದಿಂದ ಬಾಂಗ್ಲದೇಶ ವಿಮೋಚನೆಗೊಂಡಾಗಿನಿಂದ ಬಲೂಚಿಗಳ ಸ್ವಾತಂತ್ರದ ಸಂಗ್ರಾಮ ತೀವ್ರ ಸ್ವರೂಪವನ್ನು ಪಡೆದು ಪಾಕಿಸ್ತಾನದ ನಿದ್ದೆಗೆಡುಸುತ್ತಿದೆ. ಈ ಬಗ್ಗೆ ಭಾರತವು ಮೌನವಹಿಸಿದೆ.
1947 ರಲ್ಲಿ ಅಖಂಡ ಭಾರತವನ್ನು ಬ್ರೀಟಿಷರು ತೊರೆಯುವಾಗ ಕೊಟ್ಟ 3 ಆಯ್ಕೆಯಂತೆ ಪಾಕಿಸ್ತಾನದ ದಕ್ಷಿಣ ಭಾಗದಲಿರುವ ಆಗಿನ ಕಲಟ್ ಈಗಿನ ಬಲೂಚ್ ಪ್ರಾಂತ್ಯವನ್ನ ಆಳುತ್ತಿದ್ದ, ಖಾನ್ ಆಫ್ ಕಲಟ್ ಆಗಿದ್ದ ಮೀರ್ ಅಹಮ್ಮದ್ ಖಾನ್ ಸ್ವಾತಂತ್ರ್ಯ ದೇಶ ಬಲೂಚಿಸ್ತಾನ ಎಂದು ಘೋಷಿಸಿಕೊಂಡರು. ಆದರೆ ಮಹಮ್ಮದ್ ಅಲಿ ಜಿನ್ನಾ ಖಾನ್ ಆಫ್ ಕಲಟ್ ಆಗಿದ್ದ ಮೀರ್ ಅಹಮ್ಮದ್ ಖಾನ್‌ಗೆ ಪಾಕಿಸ್ತಾನದೊಂದಿಗೆ ವೀಲಿನವಾಗಲೂ ಹೇಳುತ್ತಾರೆ. ಆದರೆ ಇದಕ್ಕೆ ಒಪ್ಪದ ಬಲೂಚ್, ತಾವು ಸ್ವತಂತ್ರವಾಗಿರಲು ಬಯಸುತ್ತದೆ. ಆಗ ಪಾಕಿಸ್ತಾನ ಬಲೂಚ್ ಪ್ರಾಂತ್ಯದ ಮೇಲೆ ದಾಳಿ ಮಾಡಿ ಮಾರ್ಚ್ 27 1948 ರಂದು ಕಲಟ್ ಪಾಕಿಸ್ತಾನದ ಮುಂದೆ ಶರಣಾಗುವಂತೆ ಮಾಡಿ, ಪಾಕಿಸ್ತಾನದಲ್ಲಿ ಈಗಿನ ಬಲೂಚಿಸ್ತಾನವನ್ನು ವಿಲೀನ ಮಾಡಿಕೊಳ್ಳಲಾಗುತ್ತದೆ. ಆಗಿನಿಂದ ಹೊತ್ತಿ ಕೊಂಡ ಬಲೂಚ್ ಬೆಂಕಿ ಇನ್ನೂ ಉರಿಯುತ್ತಿದ್ದು ಮುಂದಿನ ದಿನಗಳಲ್ಲಿ ಯಾವ ಸ್ವರೂಪವನ್ನು ಪಡೆಯುತ್ತದೆ ಎಂದು ಕಾದು ನೋಡಬೇಕು.
ಲೋಕನಾಥ್ ಹೂಗಾರ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ