ಉದಯನಿಧಿ ಸ್ಟಾಲಿನ್ ಅವರ ವಿರುದ್ಧದ ಅರ್ಜಿಯನ್ನು ವಜಾ ಮಾಡಿದ ಮದ್ರಾಸ್ ಹೈಕೋರ್ಟ್.
ತಮಿಳುನಾಡು ಕ್ರೀಡಾ ಸಚಿವರಾದ ಉದಯನಿಧಿ ಸ್ಟಾಲಿನ್, ಸೇಖರ್ ಬಾಬು, ಮದಿ ಕೇಂದ್ರ ಸಚಿವರಾದ ಎ.ರಾಜ ಅವರ ವಿರುದ್ಧ ದಾಖಲಾಗಿರುವ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ಬುದುವಾರ ತಿರಸ್ಕರಿಸಿದೆ. ಹಾಗೆ ಉದಯನಿಧಿ ಸ್ಟಾಲಿನ್‌ನವರು ಸನಾತನ ಧರ್ಮವನ್ನು ಎಚ್ಐವಿ, ಮಲೇರಿಯಾ ಮತ್ತು ಡೆಂಗ್ಯೂ ಗೆ ಹೋಲಿಸಿರುವುದು ಸಂವಿಧಾನಿಕ ತತ್ವಗಳನ್ನು ಉಲ್ಲಂಘಿಸಿದೆ ಮತ್ತು ತಪ್ಪು ಮಾಹಿತಿಯನ್ನು ಹರಡಿದೆ ಎಂದು ನ್ಯಾಯಮೂರ್ತಿ ಅನಿತಾ ಸುಮಂತ್ ಹೇಳಿದ್ದಾರೆ.
ಸನಾತನ ಧರ್ಮವು ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಮತ್ತು ನಾವು ಅದರ ನಿರ್ಮೂಲನೆಯನ್ನು ಪ್ರತಿಪಾದಿಸುತ್ತೇವೆ ಎಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆಸಿದ್ದರು. ಅವರು ಸನಾತನ ಧರ್ಮವನ್ನು ಕೊರೊನ ವೈರಸ್, ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ಕಾಯಿಲೆಗಳಿಗೆ ಹೋಲಿಸಿದರು. ಹಾಗೆಯೇ, ಕೇವಲ ಟೀಕೆಗಿಂತ ನಿರ್ಮೂಲನೆಯ ಅಗತ್ಯವನ್ನು ಒತ್ತಿ ಹೇಳಿದ್ದರು. ಇದರ ಬೆನ್ನಲ್ಲೇ ವಿವಾದ ಹುಟ್ಟಿಕೊಂಡಿತು.
ಉದಯ ನೀಡಿ ಸ್ಟಾಲಿನ್ ಅವರ ಹೇಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಜೆಪಿ ಸೇರಿದಂತೆ ಹಲವಾರು ಬಲಪಂಥೀಯ ನಾಯಕರು ನ್ಯಾಯಾಲಯದ ಮೊರೆ ಹೋಗಿದ್ದರು. ಒಂದು ನಿರ್ದಿಷ್ಟ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ಅಸಂವಿಧಾನಿಕ ಎಂದು ಪ್ರತಿಪಾದಿಸಿದ್ದರು. ಈ ಬಗ್ಗೆ ಪ್ರಧಾನಿ ಮೋದಿ ಅವರು ಕೂಡ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು.
ಸೋಮವಾರ ಸುಪ್ರೀಂ ಕೋರ್ಟ್ ಸ್ಟಾಲಿನ್ ಅವರ ಟೀಕೆ ಗಳಿಗಾಗಿ ಮತ್ತು ಪರಿಹಾರಕ್ಕಾಗಿ ದೇಶದಾದ್ಯಂತ ಅವರ ವಿರುದ್ಧ ದಾಖಲಾಗಿರುವ ಹಲವಾರು ಎಫ್ಐಆರ್‌ಗಳನ್ನು ಕ್ರೂಡೀಕರಿಸಲು ಪ್ರಯತ್ನಿಸಿದ್ದಕ್ಕಾಗಿ ಅವರನ್ನು ಖಂಡಿಸಿತು. ಸಚಿವ ಸ್ಥಾನವನ್ನು ಗಮನಿಸಿದರೆ ಅದರ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿರಬೇಕು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.