‘UI’ ಚಿತ್ರದ 1st Day ಬಾಕ್ಸಾಫೀಸ್ ಕಲೆಕ್ಷನ್: ಬುದ್ದಿವಂತನ ಈ ಚಿತ್ರ ಜನರಿಗೆ ಇಷ್ಟ ಆಯ್ತಾ..?!
ಬೆಂಗಳೂರು: ಕನ್ನಡ ಚಲನಚಿತ್ರರಂಗದ ರಿಯಲ್ ನಿರ್ದೇಶಕ ಉಪೇಂದ್ರ ರಾವ್ ಅವರ ಬಹುನಿರೀಕ್ಷಿತ ಚಿತ್ರ ‘UI’ ಡಿಸೆಂಬರ್ 20 ರಂದು ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. 2040ನ ಕಥಾ ಹಂದರ ಹೊಂದಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
6.75 ಕೋಟಿ ರೂಪಾಯಿ ಮೊದಲ ದಿನದ ಕಲೆಕ್ಷನ್!
ಮಾದ್ಯಮಗಳ ವರದಿಯ ಪ್ರಕಾರ, ಭಾರತದಾದ್ಯಂತ 6.75 ಕೋಟಿ ರೂಪಾಯಿ ಗಳಿಕೆ ಮಾಡಿರುವ ‘UI’, ಅದರಲ್ಲಿ 6 ಕೋಟಿ ರೂ. ಕರ್ನಾಟಕದಿಂದಲೇ ಸಂಗ್ರಹಿಸಿದೆ. ಉಪೇಂದ್ರನ ಚಿತ್ರ ಕರ್ನಾಟಕದಲ್ಲಿ ಭರ್ಜರಿ ಪ್ರಾರಂಭವನ್ನು ಕಂಡಿದ್ದು, ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ.
ಆಕರ್ಷಕ ಶೋ ಆಕ್ಯುಪೆನ್ಸಿ:
ಕನ್ನಡದಲ್ಲಿ ಒಟ್ಟಾರೆ 72.44% ಆಕ್ಯುಪೆನ್ಸಿ ಕಂಡುಬಂದಿದ್ದು, ಬೆಳಿಗ್ಗೆ 63.06%, ಮಧ್ಯಾಹ್ನ 61.82%, ಸಂಜೆ 75% ಮತ್ತು ರಾತ್ರಿ 89.86% ದಾಖಲಾಗಿದೆ. ತೆಲುಗಿನಲ್ಲಿ 38.32% ಆಕ್ಯುಪೆನ್ಸಿ ದೊರಕಿದ್ದು, ತಮಿಳಿನಲ್ಲಿ ಕೇವಲ 7.39% ಕಲೆಕ್ಷನ್ ಕಂಡಿದೆ.
ಹಿಂದಿಯಲ್ಲೂ ಕೌತುಕ: ಆಮೀರ್ ಖಾನ್ ಮೆಚ್ಚುಗೆ!
ನಟ ಆಮೀರ್ ಖಾನ್ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, “ಉಪೇಂದ್ರ ಅವರ ಟೈಲರ್ ನಂಬಲಾಗದಷ್ಟು ಅದ್ಭುತವಾಗಿದೆ. ಇದು ದೊಡ್ಡ ಹಿಟ್ ಆಗಲಿದೆ. ಹಿಂದಿ ಪ್ರೇಕ್ಷಕರಿಗೂ ಇಷ್ಟವಾಗಲಿದೆ.” ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ನಟರ ಭಾರೀ ತಾರಾಗಣ:
ಚಿತ್ರದಲ್ಲಿ ರೀಶ್ಮಾ ನಾನಯ್ಯ, ಮುರಳಿ ಶರ್ಮಾ, ಪಿ. ರವಿ ಶಂಕರ್, ಗುರುಪ್ರಸಾದ್ ಮತ್ತು ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ರೀಶ್ಮಾ ಚಿತ್ರವನ್ನು ಬಣ್ಣಿಸುತ್ತಾ, “ಅತ್ಯಂತ ವಿಭಿನ್ನ ಅನುಭವ ನೀಡುವ ಚಿತ್ರ ಇದು” ಎಂದಿದ್ದಾರೆ.
ಹೆಚ್ಚಿಸುತ್ತಿರುವ ಕುತೂಹಲ:
ಉಪೇಂದ್ರನ ‘UI’ ಚಿತ್ರದ ಪ್ರಾರಂಭವೇ ಭಾರಿ ಕುತೂಹಲ ಮೂಡಿಸಿದೆ. ಅದ್ಬುತ ಕಥಾಹಂದರ, ಅದ್ಬುತ ಚಿತ್ರಕತೆ ಮತ್ತು ಭಾರೀ ತಾರಾಗಣದೊಂದಿಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.