Politics
ಭಗವದ್ಗೀತೆ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಬ್ರಿಟಿಷ್ ಸಂಸದೆ ಯಾರು?
ಇಂಗ್ಲೆಂಡ್: ಬ್ರಿಟನ್ ತನ್ನ ನೂತನ ಸಂಸತ್ ಸದಸ್ಯರನ್ನು ಸ್ವಾಗತ ಮಾಡಿದೆ. ಇಂದು ಬ್ರಿಟನ್ ಸಂಸತ್ತಿನಲ್ಲಿ, ಭಾರತೀಯ ಮೂಲದ ಶಿವಾನಿ ರಾಜ್ ಅವರು ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಹಿಡಿದು ತಮ್ಮ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ತದನಂತರ ಗೀತೆಯನ್ನು ಕಣ್ಣಿಗೆ ಒತ್ತಿಕೊಂಡು, ಸಂಸತ್ತಿನಲ್ಲಿ ಸಹಿ ಹಾಕಲು ಮುಂದಾಗಿದ್ದಾರೆ.
ಯಾರು ಈ ಶಿವಾನಿ ರಾಜ್?
30 ವರ್ಷದ ಶಿವಾನಿ ರಾಜ್ ಅವರು ಬ್ರಿಟಿಷ್ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿದ್ದಾರೆ. ಇವರು 2024ರ ಚುನಾವಣೆಯಲ್ಲಿ, ಲೀಸೆಸ್ಟರ್ ಈಸ್ಟ್ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. 1970ರ ದಶಕದಲ್ಲಿ ಇವರ ಪಾಲಕರು ಭಾರತದಿಂದ ಇಂಗ್ಲೆಂಡಿಗೆ ತೆರಳಿ ಅಲ್ಲಿಯೇ ನೆಲೆಸಿದ್ದರು.
2017 ರಲ್ಲಿ, ಅವರು ಮಿಸ್ ಇಂಡಿಯಾ-ಯುಕೆ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು, ಅಲ್ಲಿ ಅವರನ್ನು ಸೆಮಿ-ಫೈನಲಿಸ್ಟ್ ಎಂದು ಹೆಸರಿಸಲಾಯಿತು. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ 14,526 ಬಹುಮತವನ್ನು ಪಡೆದ ನಂತರ ಅವರು ಹೌಸ್ ಆಫ್ ಕಾಮನ್ಸ್‌ಗೆ ಆಯ್ಕೆಯಾದರು.