Bengaluru
ಅನೈತಿಕ ಚಟುವಟಿಕೆ: ಸಾಂಸ್ಕೃತಿಕ ರಾಜಧಾನಿಗೆ ಕಪ್ಪು ಚುಕ್ಕೆ.
ಮೈಸೂರು: ಪ್ರವಾಸಿಗರ ಸ್ವರ್ಗ ಹಾಗೂ ಸಾಂಸ್ಕೃತಿಕ ನಗರಿ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಇತ್ತೀಚೆಗೆ ಅನೈತಿಕ ಚಟುವಟಿಕೆಗಳು ಬೆಳೆಯುತ್ತಿರುವುದು ಗಮನಾರ್ಹವಾಗಿದೆ. ಬ್ಯೂಟಿಪಾರ್ಲರ್, ಯೋಗ ಕೇಂದ್ರ, ಆಯುರ್ವೇದಿಕ್ ಮಸಾಜ್ ಸೆಂಟರ್‌ಗಳ ಹೆಸರು ಬಳಸಿ, ಕೆಲವು ದುರುಳರು ವೇಶ್ಯಾವಾಟಿಕೆ ಸೇರಿದಂತೆ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಬೇಸರದ ಸಂಗತಿಯಾಗಿದೆ.
ಈ ಅನೈತಿಕ ಚಟುವಟಿಕೆಗಳಿಂದಾಗಿ ಈ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವವರು ಸಂಶಯಾಸ್ಪದ ದೃಷ್ಟಿಯಿಂದ ನೋಡುವಂತಾಗಿದೆ. ಪೊಲೀಸರು ಕೆಲವು ದಾಳಿ ಮಾಡುವ ಮೂಲಕ ಈ ಕೃತ್ಯಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಕಾನೂನು ಬದ್ಧ ಕಠಿಣ ಕ್ರಮ ಮತ್ತು ಸಾರ್ವಜನಿಕ ಜಾಗೃತಿ ಅಗತ್ಯವಾಗಿದೆ.