
ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಿವಿಲ್ ಸರ್ವಿಸ್ ಪ್ರಿಲಿಮ್ಸ್ ಪರೀಕ್ಷೆ ಹಾಗೂ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿಎ ಪರೀಕ್ಷೆಗಳ ದಿನಾಂಕವನ್ನು ಬದಲಾಯಿಸಲಾಗಿದೆ.
ಮೇ 26, 2024ರಂದು ನಡೆಯಬೇಕಿದ್ದ ಯುಪಿಎಸ್‌ಸಿ ಸಿವಿಲ್ ಸರ್ವಿಸ್ ಪ್ರಿಲಿಮ್ಸ್ ಪರೀಕ್ಷೆಯನ್ನು, ದಿನಾಂಕ 16.06.2024 ಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ ಮಾರ್ಚ್ 19 ರಂದು ತಿಳಿಸಿದೆ.
ಅದೇ ರೀತಿ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಗಳ ದಿನಾಂಕಗಳು ಸಹ ಬದಲಾಗಿದ್ದು. ಮೇ ತಿಂಗಳ ದಿನಾಂಕ 3, 5 ಮತ್ತು 7 ಕ್ಕೆ ನಡೆಯಬೇಕಿದ್ದ ಗ್ರೂಪ್ 1 ಮಧ್ಯಂತರ ಕೋರ್ಸ್ ಪರೀಕ್ಷೆಗಳು, ಮೇ ತಿಂಗಳ 3, 5 ಮತ್ತು 9ರಂದು ನಡೆಯಲಿದೆ.
ಗ್ರೂಪ್ 2 ಪರೀಕ್ಷೆಯು ಮೇ ತಿಂಗಳ 9, 11 ಮತ್ತು 13ರ ಬದಲಾಗಿ, ಮೇ 11, 15 ಮತ್ತು 17ರಂದು ನಡೆಯಲಿದೆ. ಫೈನಲ್ ಪರೀಕ್ಷೆಯ ಗ್ರೂಪ್ 1 ಫೈನಲ್ ಪರೀಕ್ಷೆಯು, ಮೇ 2, 4 ಮತ್ತು 8 ರಂದು ನಡೆಯಲಿದೆ. ಗ್ರೂಪ್ 2 ಫೈನಲ್ ಪರೀಕ್ಷೆಯನ್ನು ಮೇ 10, 14 ಮತ್ತು 16 ರಂದು ನಡೆಸಲಾಗುವುದು ಎಂದು ಐಸಿಎಐ ತಿಳಿಸಿದೆ.