Sports
ಬಾಂಗ್ಲಾದೇಶ ಕ್ರಿಕೆಟ್‌ನ ಕರಾಳ ದಿನ
ಢಾಕಾ: ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಹೊಸದಾಗಿ ಕಾಲಿಟ್ಟ ಯುಎಸ್ಎ ತಂಡ ಬಾಂಗ್ಲಾದೇಶ ತಂಡವನ್ನು 2-0 ಸರಣಿಯ ಅಂತರದಿಂದ ಬಗ್ಗು ಬಡಿದಿದೆ. ಈ ದಿನವನ್ನು ಬಾಂಗ್ಲಾದೇಶ ಕ್ರಿಕೆಟ್ ಇತಿಹಾಸದಲ್ಲಿ ಕರಾಳ ದಿನ ಎಂದು ಮರುಗುತ್ತಿದ್ದಾರೆ.
ಯುಎಸ್ಎ ತಂಡ ಐಸಿಸಿಯಲ್ಲಿ ಸೇರ್ಪಡೆಯಾದ 104ನೇ ತಂಡವಾಗಿದೆ. ಈ ಗೆಲುವು ಯುಎಸ್ಎ ಕ್ರಿಕೆಟ್ ತಂಡಕ್ಕೆ ಒಂದು ಮೈಲಿಗಲ್ಲು ಆಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಪಾರ ಅನುಭವ ಹೊಂದಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ, ಈಗಷ್ಟೇ ಕ್ರಿಕೆಟಿನಲ್ಲಿ ಅಂಬೆಗಾಲು ಇಡುತ್ತಿರುವ ಯುಎಸ್ಎ ವಿರುದ್ಧ ಟಿ-20 ಸರಣಿ ಸೋತಿರುವುದು ನಾಚಿಕೆಗೇಡಿನ ವಿಷಯ ಎಂದು ಸ್ವತಃ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ.