ಯುಎಸ್ಎ ಎದುರು ಹೀನಾಯ ಸೋಲು ಕಂಡ ಪಾಕಿಸ್ತಾನ.
ಟೆಕ್ಸಾಸ್: 2024ರ ಟಿ20 ವಿಶ್ವಕಪ್ ಗ್ರೂಪ್ ಪಂದ್ಯದಲ್ಲಿ ಒಂದು ಬಾರಿ ಕಪ್ ಗೆದ್ದ ಪಾಕಿಸ್ತಾನ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ ಅಂಬೆಗಾಲು ಇಡುತ್ತಿರುವ ಯುಎಸ್ಎ ತಂಡ ಎದುರಾಗಿದ್ದವು. ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನಕ್ಕೆ ಈ ರೀತಿಯ ಇನ್ನೊಂದು ನಾಚಿಕೆಗೇಡಿನ ದಿನ ಇರಲಿಕ್ಕಿಲ್ಲ. ಒಂದು ಬಾರಿ ವಿಶ್ವಕಪ್ ಹಾಗೂ ಒಂದು ಬಾರಿ ಟಿ20 ವಿಶ್ವಕಪ್ ಗೆದ್ದಿರುವ ಪಾಕಿಸ್ತಾನ ತಂಡ, ಐಸಿಸಿಯಲ್ಲಿ ಮೊನ್ನೆ ಮೊನ್ನೆಯಷ್ಟೇ ದಾಖಲಾತಿ ಮಾಡಿಕೊಂಡ ಯುಎಸ್ಎ ತಂಡದ ವಿರುದ್ಧ ಸೋಲು ಕಾಣುತ್ತದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ.
ಬಾಬರ್ ಆಝಮ್‌ರಂತಹ ಆಟಗಾರರ ಉಪಸ್ಥಿತಿಯಲ್ಲಿ ಕೂಡ ಈ ರೀತಿ ಸೋಲು ಕಂಡಿದ್ದು, ಕ್ರಿಕೆಟ್ ಜಗತ್ತು ಎಂದಿಗೂ ಮರೆಯುವುದಿಲ್ಲ. ಟಾಸ್ ಗೆದ್ದ ಯುಎಸ್ಎ ತಂಡ ಮೊದಲು ಬೌಲಿಂಗ್ ಆಯ್ಕೆಯನ್ನು ಮಾಡಿಕೊಂಡಿತು. ಪಾಕಿಸ್ತಾನ ಮೊದಲ ಇನ್ನಿಂಗ್ಸ್ ನಲ್ಲಿ 159 ರನ್ನು ಕಲೆಹಾಕಲಷ್ಟೇ ಶಕ್ತವಾಯಿತು.
ಇದನ್ನು ಬೆನ್ನಟ್ಟಿದ ಯುಎಸ್ಎ ಕೂಡ 159 ರನ್ನ ಗಳಿಸಿತು. ತದನಂತರ ಪಂದ್ಯ ಸೂಪರ್ ಓವರ್‌ಗೆ ತೆರೆದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರು ಬಾಲುಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಒಂದು ಓವರ್ ನಲ್ಲಿ ಯುಎಸ್ಎ 18 ರನ್ ಗಳಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ.