ಹಿರಿಯ ನಿರ್ಮಾಪಕ ಹಾಗೂ ರಂಗಕರ್ಮಿ ಸದಾನಂದ ಸುವರ್ಣ ಇನ್ನಿಲ್ಲ.
ಮಂಗಳೂರು: ಕನ್ನಡ ಹಾಗೂ ತುಳು ರಂಗಭೂಮಿಯಲ್ಲಿ ತಮ್ಮ ಛಾಪನ್ನು ಮೂಡಿಸಿ, ನೂರಾರು ಅದ್ಬುತ ನಾಟಕಗಳನ್ನು ರಚಿಸಿ ನಿರ್ದೇಶಿಸಿದ, ರಂಗ ತಪಸ್ವಿ, ಸದಾನಂದ ಸುವರ್ಣ ಅವರು ತಮ್ಮ ವಯೋಸಹಜ ಅನಾರೋಗ್ಯದಿಂದ ತಮ್ಮ ಕೊನೆಯುಸಿರೆಳೆದಿದ್ದಾರೆ. ಇವರಿಗೆ 92 ವರ್ಷ ವಯಸ್ಸಾಗಿತ್ತು.
ತಮ್ಮ ಜೀವಿತಾವಧಿಯಲ್ಲಿ ಬಹುತೇಕ ಸಮಯವನ್ನು ನಾಟಕ ಹಾಗೂ ಸಿನಿಮಾ ರಂಗಕ್ಕೆ ನೀಡಿದ ಸುವರ್ಣ ಅವರು, ಘಟಶ್ರಾದ್ಧ, ಕುಬಿ ಮತ್ತು ಇಯಾಲದಂತಹ ಚಲನಚಿತ್ರಗಳನ್ನು ನೀಡಿದ್ದಾರೆ. ಗೆಡ್ಡೆದ ಭೂತ ಇವರ ಅತ್ಯುತ್ತಮ ಧಾರಾವಾಹಿ, ಇವರು ಶಿವರಾಂ ಕಾರಂತರ ಸಾಕ್ಷ್ಯಚಿತ್ರವನ್ನು ಕೂಡ ಮಾಡಿದ್ದಾರೆ.
ಸದಾನಂದ ಸುವರ್ಣ ಅವರಿಗೆ ಇತ್ತಿಚೆಗೆ ಕರ್ನಾಟಕ ಸರ್ಕಾರವು ಪ್ರತಿಷ್ಠಿತ ಬಿ.ವಿ.ಕಾರಂತರ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಆವೃತ್ತಿಯ ಸಂಪಾದಕರಾಗಿದ್ದ, ಲೇಖಕಿ ದಿ. ಸೀತಾಲಕ್ಷ್ಮಿ ಕರ್ಕಿಕೋಡಿ ಅವರು ಸುವರ್ಣ ಅವರ ಕುರಿತು, ‘ರಂಗ ಜಂಗಮ ಸದಾನಂದ ಸುವರ್ಣ’ ಎಂಬ ಸಂಶೋಧನಾ ಪ್ರಬಂಧವನ್ನು ಮುಂಬೈ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಸದಾನಂದ್ ಸುವರ್ಣ ಅವರ ಅಗಲಿಕೆ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ.