Bengaluru
ಹಿರಿಯ ಲೇಖಕಿ ಕಮಲಾ ಹಂಪನಾ ಇನ್ನಿಲ್ಲ.

ಬೆಂಗಳೂರು: ಕನ್ನಡದ ಪ್ರಖ್ಯಾತ ಲೇಖಕರು ಹಾಗೂ ವಿದ್ವಾಂಸರಾಗಿದ್ದ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ನಾಡೋಜ ಪ್ರಶಸ್ತಿ ಪುರಸ್ಕೃತರು ಆದಂತಹ ಶ್ರೀಮತಿ. ಕಮಲಾ ಹಂಪನಾ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಇವರಿಗೆ 88 ವರ್ಷ ವಯಸ್ಸಾಗಿತ್ತು. ಹಂಪನಾ ಅವರು ಪತಿ ಹಂ. ಪ. ನಾಗರಾಜಯ್ಯ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕಮಲಾ ಹಂಪನಾ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ, 19 35 ರಲ್ಲಿ ಜನಿಸಿದರು. ಇವರು ಕಥಾಸಂಕಲನ ಬರಹ, ಸಂಶೋಧನೆ ಬರಹ, ವಿಮರ್ಶೆ-ವೈಚಾರಿಕ, ಸಂಪಾದನೆ, ಜೀವನ ಪರಿಚಯ, ಶಿಶು ಸಾಹಿತ್ಯ, ವಚನ ಸಂಕಲನ, ಅನುವಾದ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಕಮಲ ಹಂಪನಾ ಅವರು 2003ರಲ್ಲಿ ಮೂಡಬಿದ್ರೆಯಲ್ಲಿ ನಡೆದಂತಹ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಕೂಡ ವಹಿಸಿಕೊಂಡಿದ್ದರು.