FinanceNational

ವಿಜಯ್ ಮಲ್ಯಗೆ ಬೇಕಂತೆ ಬ್ಯಾಂಕ್‌ಗಳಿಂದ ಲೆಕ್ಕ: ₹6,200 ಕೋಟಿ ಸಾಲ, ₹14,000 ಕೋಟಿ ವಶ!

ಬೆಂಗಳೂರು: ಪರಾರಿಯಾದ ಉದ್ಯಮಿ ವಿಜಯ್ ಮಲ್ಯ ಹೊಸ ತಿರುವು ನೀಡಿದ್ದಾರೆ! ಬೆಂಗಳೂರು ಹೈಕೋರ್ಟ್‌ನಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಿರುವ ಅವರು, ಬ್ಯಾಂಕುಗಳು ವಶಪಡಿಸಿಕೊಂಡ ಹಣದ ಸಂಪೂರ್ಣ ಲೆಕ್ಕಪತ್ರ ನೀಡಬೇಕು ಎಂದು ಕೋರಿದ್ದಾರೆ.

ಯಾವ ಅಂಶದ ಬಗ್ಗೆ ವಿವಾದ?
ಮಲ್ಯ ಪರಾರಿಯಾದರೂ, ಸಾಲದ ಶೂಲ ಈತನಿಗೆ ಇನ್ನೂ ಮುಗಿದಿಲ್ಲ! ₹6,200 ಕೋಟಿ ರೂ. ಸಾಲಕ್ಕೆ ಈಗಾಗಲೇ ₹14,000 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಮಲ್ಯ ಪರ ವಕೀಲ ಸಜನ ಪೂವಯ್ಯ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ವಿತ್ತ ಮಂತ್ರಿಗಳು ಲೋಕಸಭೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ ಎಂಬುದಾಗಿ ವಕೀಲರು ವಾದಿಸಿದ್ದಾರೆ.

ಮಲ್ಯ ವಾದ: ಬಾಕಿ ಹಣವನ್ನು ಯಾಕೆ ವಾಪಸು ಕೊಡುತ್ತಿಲ್ಲ?
ಮಲ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಂತೆ, “ನಾನು ₹6203 ಕೋಟಿ ರೂ. ಸಾಲವನ್ನು ಮಾಡಿದ್ದೆ. ಆದರೆ, ಈಗ ಬ್ಯಾಂಕುಗಳು ₹14,131.6 ಕೋಟಿ ರೂ. ವಶಪಡಿಸಿಕೊಂಡಿವೆ! ಹಾಗಿದ್ದರೂ ನನ್ನನ್ನು ಆರ್ಥಿಕ ಅಪರಾಧಿ ಎಂದು ಕರೆಯುತ್ತಿದ್ದಾರೆ!” ಎಂದು ಪ್ರಶ್ನಿಸಿದ್ದಾರೆ.

ನ್ಯಾಯಾಲಯದ ಹೊಸ ಆದೇಶ ಏನು?
ನ್ಯಾಯಮೂರ್ತಿ ಆರ್. ದೇವದಾಸ್ ನೇತೃತ್ವದ ಹೈಕೋರ್ಟ್ ಪೀಠ ಈ ಕುರಿತು ಬ್ಯಾಂಕುಗಳಿಗೆ ಮತ್ತು ಸಾಲ ವಸೂಲಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಮಲ್ಯ “ನಾನು ಎರಡು ಪಟ್ಟು ಹೆಚ್ಚುವರಿ ಹಣ ತಲುಪಿಸಿರುವಾಗ, ಬ್ಯಾಂಕುಗಳು ಇದನ್ನು ನ್ಯಾಯಿಕವಾಗಿ ಸಮರ್ಥಿಸಿಕೊಳ್ಳಬೇಕಾಗಿದೆ” ಎಂದು ಒತ್ತಾಯಿಸಿದ್ದಾರೆ.

ಮಲ್ಯ ಪರಾರಿ, ಆದರೆ ಹಣ ವಾಪಸು – ಸರ್ಕಾರದ ಪ್ರತಿಕ್ರಿಯೆ!
ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದಂತೆ, ED (Enforcement Directorate) ಒಟ್ಟು ₹22,280 ಕೋಟಿ ರೂ. ಆಸ್ತಿಗಳನ್ನು ವಶಪಡಿಸಿಕೊಂಡಿದೆ. ಇದರಲ್ಲಿ, ಮಲ್ಯನಿಗೆ ಸೇರಿದ ₹14,131.6 ಕೋಟಿ ರೂ. ಸಂಪೂರ್ಣವಾಗಿ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ಮರಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಲ್ಯಗೆ ಸಿಗುತ್ತಾ ನ್ಯಾಯ?
ಈ ಪ್ರಕರಣ ನ್ಯಾಯಾಂಗ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಹೊಸ ಚರ್ಚೆ ಹುಟ್ಟಿಸಿದೆ. ಬ್ಯಾಂಕುಗಳು ಮಲ್ಯನನ್ನು ಇನ್ನೂ ಆರ್ಥಿಕ ಅಪರಾಧಿಯನ್ನೇ ಎಣಿಸುತ್ತವೆಯೋ? ಅಥವಾ, ಆತನ ವಾದಕ್ಕೆ ನ್ಯಾಯ ಸಿಗುತ್ತದೆಯೋ? ಇದು ಸದ್ಯದ ಹಾಟ್ ಟಾಪಿಕ್!

Show More

Related Articles

Leave a Reply

Your email address will not be published. Required fields are marked *

Back to top button