BengaluruEntertainment
ದರ್ಶನ್ ನೋಡಲು ಬಂದ ಪತ್ನಿ ವಿಜಯಲಕ್ಷ್ಮಿ.
ಬೆಂಗಳೂರು: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಈಗಾಗಲೇ 9 ದಿನಗಳು ಸಂದಿದೆ. ಆದರೆ ಇಲ್ಲಿಯವರೆಗೆ ಕುಟುಂಬದ ಯಾವುದೇ ಸದಸ್ಯರಾಗಲಿ ದರ್ಶನ್ ಅವರನ್ನು ಭೇಟಿಯಾಗಿರಲಿಲ್ಲ. ಆದರೆ ಈಗ ದರ್ಶನವರ ಪತ್ನಿಯಾದ ವಿಜಯಲಕ್ಷ್ಮಿ ಅವರು ದರ್ಶನ್ ಅವರನ್ನು ಭೇಟಿಯಾಗಲು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.
ದರ್ಶನ್ ಅವರನ್ನು ಬಿಡುಗಡೆಗೊಳಿಸಲು ಪತ್ನಿ ವಿಜಯಲಕ್ಷ್ಮಿ ಅವರು, ರಾಜ್ಯದ ಪ್ರತಿಷ್ಠಿತ ವಕೀಲರ ತಂಡವನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಕೂಡ ಇದೀಗ ಹೊರ ಬರುತ್ತಿದೆ. ಪತಿಯ ಪರವಾಗಿ ವಿಜಯಲಕ್ಷ್ಮಿ ಅವರು ಕಾನೂನಾತ್ಮಕ ಹೋರಾಟ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈಗಾಗಲೇ ಬಂಧನಕ್ಕೆ ಒಳಪಟ್ಟ ಆರೋಪಿಗಳ ಮನೆಯ ಮಹಜರನ್ನು ಪೊಲೀಸರು ಮಾಡಿದ್ದಾರೆ.