ಕಾಂಗ್ರೆಸ್ ಪಕ್ಷದಿಂದ ವಜಾಗೊಂಡ ವಿನಯ್ ಕುಮಾರ್: ಬೆಂಬಲ ನೀಡಿದಂತೆ ಕಾರ್ಯಕರ್ತರಿಗೆ ಎಚ್ಚರಿಕೆ!
ದಾವಣಗೆರೆ: ಇನ್ಸೈಟ್ಸ್‌ಐಎಎಸ್ ಸಂಸ್ಥಾಪಕ ವಿನಯ್ ಕುಮಾರ್ ಜಿ.ಬಿ ಅವರು 6 ವರ್ಷಗಳ ಕಾಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ವಜಾಗೊಂಡಿದ್ದಾರೆ. ಅವರೇ ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದು, ಜನಸಾಮಾನ್ಯರ ಹಕ್ಕುಗಳ ಪರವಾದ ಹೋರಾಟಕ್ಕೆ ಸಂಬಂಧಿಸಿದಂತೆ, ಕುಟುಂಬ ರಾಜಕೀಯ, ಜಾತಿ ತಾರತಮ್ಯ, ಮತ್ತು ದಾವಣಗೆರೆಯ ಪ್ರಭಾವಿ ಜನಪ್ರತಿನಿಧಿಗಳ ವಿರುದ್ಧ ಸ್ವಂತ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕಾರಣ ವಜಾ ಮಾಡಿದ್ದಾರೆ ಎಂದು ಹೇಳಿದ್ದಾರೆ.
“ನಾನು ಟಿಕೆಟ್ ಪಡೆದಿದ್ದರೆ ದಾವಣಗೆರೆ ಕ್ಷೇತ್ರದ ಸಂಸದನಾಗುತ್ತಿದ್ದೆ ಎಂಬುದು ಎಲ್ಲರಿಗೂ ಗೊತ್ತು. ಆದರೂ, ನಾನು ಹೋರಾಟ ನಿಲ್ಲಿಸಿಲ್ಲ. ಪ್ರಭಾವಿ ಶಕ್ತಿಗಳ ವಿರುದ್ಧ, ಪ್ರಭಾವಿ ರಾಜಕೀಯ ನಾಯಕರ ವಿರುದ್ಧ ನಿಂತು ಹೋರಾಡುತ್ತಿದ್ದೇನೆ,” ಎಂದು ವಿನಯ್ ಕುಮಾರ್ ಹೇಳಿದರು. “ನಾನು ಒಂದು ಪೀಳಿಗೆಯ ಮೊದಲನೇ ರಾಜಕಾರಣಿ ಎಂದು ಹೆಮ್ಮೆಯಿಂದಿದ್ದೇನೆ. ನನ್ನ ಎಲ್ಲಾ ನಿರ್ಣಯಗಳಿಗೆ ಮತ್ತು ಕ್ರಮಗಳಿಗೆ ನಾನು ತಲೆಬಾಗುವುದಿಲ್ಲ,” ಎಂದು ಹೇಳಿದ್ದಾರೆ.
ಅವರ ಹೇಳಿಕೆಯಲ್ಲಿ, ಅನ್ಯಾಯದ ವಿರುದ್ಧ ಹೋರಾಟದ ದ್ವನಿ ಎದ್ದು ಕಾಣುತ್ತಿದೆ. “ನಾನು ಹೋರಾಟ ಮುಂದುವರಿಸುತ್ತೇನೆ, ಏಕೆಂದರೆ ಜನಸಾಮಾನ್ಯರ ಹಕ್ಕುಗಳಿಗಾಗಿ ಪ್ರಜಾಪ್ರಭುತ್ವದಲ್ಲಿ ಭಾಗವಹಿಸಲು ಪ್ರತಿಯೊಬ್ಬರಿಗೂ ಅವಕಾಶ ಇರಬೇಕು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.