Bengaluru
ಕಾಗುಣಿತವನ್ನು ಹೀಗೂ ಕಲಿಯಬಹುದೇ? ವೈರಲ್ ಆಯ್ತು ನೋಡಿ ಟೀಚರ್ ವಿಡಿಯೋ.
ಬೆಂಗಳೂರು: ಕನ್ನಡ ಭಾಷೆಯನ್ನು ಕರಿಯುವುದು ಬೆಣ್ಣೆ ಸವಿದಂತೆ ಸುಲಭ ಎಂಬ ಮಾತಿದೆ. ಹಾಗೆ ಅಷ್ಟೇ ಸುಲಭವಾಗಿ ಕನ್ನಡ ಕಾಗುಣಿತ ಅಕ್ಷರಗಳನ್ನು ಇಲ್ಲಿ ಒಬ್ಬ ಶಿಕ್ಷಕಿಯು ಅತ್ಯಂತ ಸುಲಭವಾಗಿ ಹಾಗೂ ಸೃಜನಾತ್ಮಕವಾಗಿ ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಹರಿದಾಡುತ್ತಿದೆ.
ಕಾಗುಣಿತಾಕ್ಷರಗಳ ಆಕಾರಗಳನ್ನು, ತಮ್ಮ ವಿಭಿನ್ನ ಅಂಗ ಭಂಗಿಗಳಿಂದ ತಿಳಿಸುವ ಮೂಲಕ, ಮಕ್ಕಳಲ್ಲಿ ಕಲಿಯುವ ಬಯಕೆಯನ್ನು ಇವರು ಇನ್ನಷ್ಟು ವೃದ್ಧಿ ಮಾಡುತ್ತಿದ್ದಾರೆ. ಇದನ್ನು ನೋಡಿದ ನಟ್ಟಿಗರು, “ಇಂತಹ ಶಿಕ್ಷಕಿ ಪಡೆಯೋಕೆ ಮಕ್ಕಳು ಅದೃಷ್ಟ ಮಾಡಿದವು.” ಎಂದು ಎಂದು ಹೇಳಿದ್ದಾರೆ.