
ನವದೆಹಲಿ: ಭಾರತದ ದಿಗ್ಗಜ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಹಾಗೂ ಅವರ ಪತ್ನಿ ಆರತಿ ಅವರ ವೈವಾಹಿಕ ಜೀವನದಲ್ಲಿ ಬದಲಾವಣೆ ಆಗುತ್ತಿರುವುದರ ಕುರಿತು ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಮಾದ್ಯಮಗಳ ವರದಿ ಪ್ರಕಾರ, ದಂಪತಿಗಳು ಕಳೆದ ಕೆಲವು ತಿಂಗಳಿಂದ ಪ್ರತ್ಯೇಕವಾಗಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ, ವಿಚ್ಛೇದನದ ಸಾಧ್ಯತೆಗಳ ಕುರಿತೂ ಬೆಳವಣಿಗೆಯಾಗಿದೆ.
ಒಂದು ದಶಕದ ಐಕಾನಿಕ್ ಜೋಡಿ:
ಸೆಹ್ವಾಗ್, 104 ಟೆಸ್ಟ್‌ಗಳು ಹಾಗೂ 251 ಏಕದಿನ ಪಂದ್ಯಗಳನ್ನು ಆಡಿದ ಆಟಗಾರ, 2004ರಲ್ಲಿ ಆರತಿಯನ್ನು ಮದುವೆಯಾದರು. ಅವರಿಬ್ಬರಿಗೆ ಇಬ್ಬರು ಮಕ್ಕಳು ಇದ್ದಾರೆ – ಆರ್ಯವೀರ್ (2007 ಜನನ) ಮತ್ತು ವೇದಾಂತ್ (2010 ಜನನ). ಆದರೆ, ಈ ಹೊಸ ವರದಿಯ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮಗಳು ಚರ್ಚೆಯ ವೇದಿಕೆಯಾಗಿವೆ.
ಸಮಾಜ ಮಾಧ್ಯಮದಲ್ಲಿ ಸಂಚಲನ:
ಸೆಹ್ವಾಗ್ ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ (ಮಾಜಿ ಟ್ವಿಟರ್) ಖಾತೆಯಲ್ಲಿ ಆರತಿ ಅವರೊಂದಿಗೆ ಇತ್ತೀಚಿನ ಚಿತ್ರಗಳನ್ನು ಪೋಸ್ಟ್ ಮಾಡಿಲ್ಲ ಎಂಬುದು ಗಮನಸೆಳೆದಿದೆ. ಅವರ ಇನ್‌ಸ್ಟಾಗ್ರಾಮ್ ಖಾತೆ ಪ್ರೈವೇಟ್ ಆಗಿದ್ದು, ಸೆಹ್ವಾಗ್ ಅವರನ್ನು ಫಾಲೋ ಮಾಡುತ್ತಿಲ್ಲ ಎಂಬುದೂ ಚರ್ಚೆಯ ಭಾಗವಾಗಿದೆ.
ಮಕ್ಕಳ ಬಗ್ಗೆ ಸೆಹ್ವಾಗ್ ಹೆಮ್ಮೆ:
ಇತ್ತ, ಸೆಹ್ವಾಗ್ ಅವರ ಮಗ ಆರ್ಯವೀರ್, 2024 ರಲ್ಲಿ ಕೂಚ್ ಬೇಹರ್ ಟ್ರೋಫಿಯ ಪಂದ್ಯದಲ್ಲಿ 297 ರನ್ ಗಳಿಸಿ ತಂದೆಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಆದಾಗ್ಯೂ, ಸೆಹ್ವಾಗ್ ಅವರ 319 ರನ್ ಗರಿಷ್ಠ ಇತಿಹಾಸ ಮೊತ್ತವನ್ನು ಮೀರುವಲ್ಲಿ ವಿಫಲರಾಗಿದ್ದು, ಫೆರಾರಿ ಕಾರು ಕೊಡುವ ಪ್ರಾಮಿಸ್ ಕೈತಪ್ಪಿಸಿದೆ. ಸೆಹ್ವಾಗ್ ಈ ಬಗ್ಗೆ “23 ರನ್ ದಾಟಿದ್ರೆ ಫೆರಾರಿ ಸಿಗ್ತಿತ್ತು, ಉತ್ತಮ ಆಟ, ಮುಂದುವರೆಯಿರಿ!” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
ಈ ಕಥೆಯು ನಿಜವೋ ಅಥವಾ ಸುಳ್ಳೋ?
ಸೆಹ್ವಾಗ್ ಮತ್ತು ಆರತಿ ಅವರ ಕುಟುಂಬದ ಸ್ಥಿತಿಯ ಬಗ್ಗೆ ಆಧಿಕೃತ ಪ್ರತಿಕ್ರಿಯೆ ಇನ್ನೂ ಬರಬೇಕಾಗಿದೆ. ದಂಪತಿಗಳು ಈ ಕುರಿತಾದ ಸ್ಪಷ್ಟನೆ ನೀಡಿದ ನಂತರ ಹೆಚ್ಚಿನ ವಿವರಗಳು ಹೊರಬೀಳಲಿವೆ.