Politics
“ಕಾದು ನೋಡಿ”- ಸೋನಿಯಾ ಗಾಂಧಿ.
ನವದೆಹಲಿ: ಈಗಾಗಲೇ ಎಕ್ಸಿಟ್ ಪೋಲ್ ಫಲಿತಾಂಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎಲ್ಲಾ ಫಲಿತಾಂಶಗಳು ಮೋದಿ 3.0 ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇಂಡಿಯಾ ಬ್ಲಾಕ್ 150ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದಿಲ್ಲ ಎಂದು ಹೇಳಲಾಗುತ್ತಿದೆ.
ಈ ಕುರಿತು ಕಾಂಗ್ರೆಸ್ ನಾಯಕಿ ಶ್ರೀಮತಿ. ಸೋನಿಯಾ ಗಾಂಧಿ ಅವರು ಪ್ರತಿಕ್ರಿಯಿಸಿದ್ದಾರೆ. “ಎಕ್ಸಿಟ್ ಪೋಲ್ ಫಲಿತಾಂಶ ಸಂಪೂರ್ಣ ಬದಲಾಗುವುದು, ಇಂಡಿಯಾ ಮೈತ್ರಿಕೂಟ ಜಯ ಸಾಧಿಸುವುದು, ಕಾದು ನೋಡಿ”. ಎಂದು ಹೇಳಿದ್ದಾರೆ.
ನಾಳೆ ಲೋಕಸಭಾ ಚುನಾವಣೆ – 2024 ರ ಫಲಿತಾಂಶ ಹೊರಬರಲಿದೆ. ನಿಮ್ಮ ಪ್ರಕಾರ ಯಾರು ಈ ಬಾರಿ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ?