
ಬೆಂಗಳೂರು: ಕರ್ನಾಟಕ ಪೋಲಿಸ್ ಇಲಾಖೆಯಿಂದ ರಾಜ್ಯದ ಜನತೆಗೆ ಮಹತ್ವದ ಎಚ್ಚರಿಕೆ ನೀಡಲಾಗಿದೆ. ಕೆಲವೊಂದು ಅಂತಾರಾಷ್ಟ್ರೀಯ ದೂರವಾಣಿ ಸಂಖ್ಯೆಗಳು ಮೊಬೈಲ್ ಬಳಕೆದಾರರನ್ನು ವಂಚನೆಗೆ ಗುರಿಮಾಡಲು ಹೊಸ ತಂತ್ರಗಳನ್ನು ಬಳಸುತ್ತಿವೆ. ಈ ಸಂಖ್ಯೆಗಳಿಂದ ಕಾಲ್ ಬಂದರೆ ತಕ್ಷಣ ಫೋನ್ ಅನ್ನು ಕಟ್ ಮಾಡಿ. ವಾಪಸ್ ಕರೆ ಮಾಡಬಾರದು.
ಯಾವುದು ಈ ಸಂಖ್ಯೆಗಳು?:
+94777455913, +37127913091, +37178565072, +56322553736, +37052529259, +255901130460, ಅಥವಾ +375, +371, +381 ಪ್ರಾರಂಭವಾಗುವ ಯಾವುದೇ ಸಂಖ್ಯೆಗಳು.
ಈ ಸಂಖ್ಯೆಗಳು ಒಮ್ಮೊಮ್ಮೆ ಮಿಸ್ ಕಾಲ್ ಕೂಡ ನೀಡುತ್ತವೆ.
ಬಳಕೆದಾರರು ವಾಪಸ್ ಕರೆ ಮಾಡಿದರೆ ಏನಾಗುತ್ತದೆ?:
- ಕಾಂಟಾಕ್ಟ್ ಲಿಸ್ಟ್ ಕದಿಯುತ್ತಾರೆ: 3 ಸೆಕೆಂಡುಗಳಲ್ಲಿ ನಿಮ್ಮ ಸಂಪರ್ಕಗಳನ್ನು ಹ್ಯಾಕ್ ಮಾಡುತ್ತಾರೆ.
- ಬ್ಯಾಂಕ್ ವಿವರ ಅಪಾಯ: ಮೊಬೈಲ್‌ನಲ್ಲಿ ಸೇಫ್ ಇರುವ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ದೋಚುತ್ತಾರೆ.
ಈ ದೇಶಗಳಿಗೆ ಸೇರಿವೆ ಈ ಸಂಖ್ಯೆಗಳು:
+375: ಬೆಲಾರಸ್
+371: ಲಾಟ್ವಿಯಾ
+381: ಸರ್ಬಿಯಾ
+563: ವ್ಯಾಲ್ಪರೈಸೋ
+370: ವಿಲ್ನಿಯಸ್
+255: ಟಾಂಜಾನಿಯಾ
ಇನ್ನೊಂದು ಎಚ್ಚರಿಕೆ: SIM ಹ್ಯಾಕ್ ತಂತ್ರ
ಅಪರಿಚಿತ ಕರೆಗಳಿಂದ #90 ಅಥವಾ #09 ಅನ್ನು ನಿಮಗೆ ಕೇಳಿದರೆ ಒತ್ತಬೇಡಿ. ಇದು ನಿಮ್ಮ ಸಿಮ್ ಕಾರ್ಡ್ ಅನ್ನು ಹ್ಯಾಕ್ ಮಾಡುವುದು ಮತ್ತು ನಿಮ್ಮ ಹೆಸರಿನಲ್ಲಿ ಅಪರಾಧ ಕೃತ್ಯಗಳನ್ನು ರೂಪಿಸುವ ಹೊಸ ತಂತ್ರ.
ಸೈಬರ್ ಕ್ರೈಮ್ ವಿಭಾಗದ ಎಚ್ಚರಿಕೆ:
ಕನ್ನಡದಲ್ಲಿ ಈ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ಸೈಬರ್ ಕ್ರೈಮ್ ವಿಭಾಗ ಪ್ರಕಟಣೆ ಹೊರಡಿಸಿದ್ದು, ಈ ಸಂದೇಶವನ್ನು ಎಲ್ಲರಿಗೂ ತಲುಪಿಸಲು ಕೋರಿದೆ. ಇದು ಸೈಬರ್ ಅಪರಾಧಿಗಳನ್ನು ತಡೆಯಲು ಸಹಕಾರಿ ಆಗುತ್ತದೆ.
ಜಾಗರೂಕತೆ ಅತೀ ಮುಖ್ಯ:
ಅಪರಿಚಿತ ಕರೆಗಳಿಗೆ ಉತ್ತರಿಸುವ ಮುನ್ನ ಯೋಚಿಸಿ. ಹೊಸ ತಂತ್ರಜ್ಞಾನಗಳ ದುರುಪಯೋಗದಿಂದ ರಕ್ಷಿಸಿಕೊಳ್ಳಿ.