Bengaluru

ಕರಾವಳಿ ಹಾಗೂ ಮಲೆನಾಡಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಎಚ್ಚರಿಕೆ ಸಂದೇಶ!!

ಉತ್ತರ ಕನ್ನಡ: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆ ಈಗ ಕರಾವಳಿ ಹಾಗೂ ಮಲೆನಾಡಿನಲ್ಲಿ ವಾಸಿಸುವ ಜನರಲ್ಲಿ ಅತೀವ ಆತಂಕ ಉಂಟುಮಾಡಿದೆ. ಕಳೆದ ಒಂದು ವಾರದಿಂದ ಈ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಈ ನಿಟ್ಟಿನಲ್ಲಿ ಹವಾಮಾನ ಇಲಾಖೆಯ ಮಾಹಿತಿಗಳನ್ನು ಪರಿಗಣಿಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು, ಕರಾವಳಿ ಹಾಗೂ ಮಲೆನಾಡಿನ ಜನರಿಗೆ ಮುನ್ನೆಚ್ಚರಿಕೆ ಮೊಬೈಲ್ ಸಂದೇಶವನ್ನು ರವಾನಿಸಿದೆ.

“Scattered Heavy to very heavy rains and at isolated Extremely heavy rains are Very Likely to occur over Uttara Kannada, Udupi, Dakshina Kannada, Shivamogga, Kodagu, Chikkamagaluru and parts of Hassan districts. Avoid venturing in rivers, sinking zone, landslide areas and flood prone areas. IMD-Bengaluru.” (ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ನದಿಗಳು, ಮುಳುಗುವ ಪ್ರದೇಶ, ಭೂಕುಸಿತ ಪ್ರದೇಶಗಳು ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಹಸ ಮಾಡುವುದನ್ನು ತಪ್ಪಿಸಿ. ಐಎಮ್‌ಡಿ-ಬೆಂಗಳೂರು.” ಎಂಬ ಸಂದೇಶ ಕರಾವಳಿ ಹಾಗೂ ಮಲೆನಾಡಿನ ಜನರ ಮೊಬೈಲಿಗೆ ರವಾನಿಯಾಗಿರುತ್ತದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತಗಳು ಕಂಡುಬಂದಿದ್ದು, ಇಲ್ಲಿಯ ಸಂಚಾರವನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ಚರ್ಚೆ ನಡೆಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ದಾಖಲೆಯ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿರುತ್ತದೆ.

Show More

Leave a Reply

Your email address will not be published. Required fields are marked *

Related Articles

Back to top button