ಕುತ್ತು ತಂದ ಪ್ರೀ ವೆಡ್ಡಿಂಗ್, ವೈದ್ಯ ಅಮಾನತ್ತು.


ಚಿತ್ರದುರ್ಗ: ಭರಮಸಾಗರದ ಆರೋಗ್ಯ ಕೇಂದ್ರದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸಿದ ವೈದ್ಯ ಅಭಿಷೇಕ್ ಈಗ ಅಮಾನತ್ತುಗೊಂಡಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಅಭಿಷೇಕ್ ಅವರು ಕೆಲವು ದಿನಗಳ ಹಿಂದೆಯಷ್ಟೇ ಭರಮಸಾಗರ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ನೇಮಕ ಹೊಂದಿದ್ದರು.
ಅಭಿಷೇಕ್ ಅವರ ಮದವೆಯ ಹಿನ್ನೆಲೆಯಲ್ಲಿ ನಾಲ್ಕು ಛಾಯಾಗ್ರಾಹಕರನ್ನು ಭರಮಸಾಗರ ಆರೋಗ್ಯ ಕೇಂದ್ರಕ್ಕೆ ಕರೆಸಿ, ಒಬ್ಬ ವ್ಯಕ್ತಿಗೆ ರೋಗಿಯ ವೇಷ ಧರಿಸಿ, ಆಪರೇಷನ್ ಮಾಡುವಂತೆ ನಟನೆ ಮಾಡುತ್ತಿದ್ದರು. ಈ ವಿಡಿಯೋ ಇನ್ಸ್ಟಾಗ್ರ್ಂ ನಲ್ಲಿ ವೈರಲ್ ಆಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೂ ತಲುಪಿದ್ದು, ಅವರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿದ್ದಾರೆ.
ಗುತ್ತಿಗೆ ಆಧಾರದ ವೈದ್ಯ ಅಭಿಷೇಕ್ ಮೇಲೆ ಕ್ರಮ ತೆಗೆದುಕೊಂಡ ಜಿಲ್ಲಾಧಿಕಾರಿಗಳು ಅವರನ್ನು ಅಮಾನತು ಮಾಡಿದ್ದಾರೆ.ಈ ಕುರಿತ ಸಂಪೂರ್ಣ ವರದಿ ನೀಡಬೇಕೆಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ವೈದ್ಯನಿಗೆ ಆಪತ್ತು ತಂದಿದೆ.