Finance
ಭಾರತದ ಷೇರು ಮಾರುಕಟ್ಟೆಯಲ್ಲಿ ಬಿಎಸ್‌ಇ ಮತ್ತು ಎನ್‌ಎಸ್‌ಇ ಎಂದರೇನು?: ಇದರಲ್ಲಿ ಯಾವುದು ಹೂಡಿಕೆಗೆ ಉತ್ತಮ?
ಮುಂಬೈ: ಷೇರು ಮಾರುಕಟ್ಟೆಯಲ್ಲಿ ಬಿಎಸ್‌ಇ (ಬಾಂಬೆ ಸ್ಟಾಕ್ ಎಕ್ಸ್ಚೇಂಜ್) ಮತ್ತು ಎನ್‌ಎಸ್‌ಇ (ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್) ಪ್ರಮುಖ ತಾಣಗಳು. ಇವುಗಳಲ್ಲಿ ದೇಶದ ಸಾವಿರಾರು ಹೂಡಿಕೆದಾರರು ಮತ್ತು ವಹಿವಾಟುಗಾರರು ತಮ್ಮ ಹೂಡಿಕೆಗಳನ್ನು ಸುಲಭವಾಗಿ ವಹಿವಾಟು ಮಾಡುತ್ತಾರೆ. ಆದರೆ ಈ ಎರಡೂ ಬಂಡವಾಳ ಮಾರುಕಟ್ಟೆ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ನೀವು ತಿಳಿದಿರಬೇಕಾಗಿದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE):
ಇತಿಹಾಸ:
- 1875ರಲ್ಲಿ ಸ್ಥಾಪಿತವಾದ ಬಿಎಸ್‌ಇ ಏಷ್ಯಾದ ಅತಿ ಹಳೆಯ ಷೇರು ಮಾರುಕಟ್ಟೆ.
- “ದಿ ನೆಟಿವ್ ಶೇರ್ & ಸ್ಟಾಕ್ ಬ್ರೋಕರ್ಸ್ ಅಸೋಸಿಯೇಷನ್” ಎಂಬ ಹೆಸರಿನಲ್ಲಿ ಪ್ರಾರಂಭವಾಯಿತು.
ಸೆನ್ಸೆಕ್ಸ್ ಮತ್ತು ಇತರ ಸೂಚ್ಯಂಕಗಳು:
- 1986ರಲ್ಲಿ “ಸೆನ್ಸೆಕ್ಸ್ 30” ಬಿಡುಗಡೆಯಾಯಿತು, ಇದು ಶ್ರೇಷ್ಠ 30 ಷೇರು ಕಂಪನಿಗಳ ಪಟ್ಟಿ.
- ಬಿಎಸ್‌ಇ 100, ಬಿಎಸ್‌ಇ 200, ಬಿಎಸ್‌ಇ ಫಾರ್ಮಾ, ಬಿಎಸ್‌ಇ ಮೆಟಲ್ ಮೊದಲಾದ ಹಲವು ಸೂಚ್ಯಂಕಗಳ ಮೂಲಕ ವಹಿವಾಟುಗಾರರಿಗೆ ಮಾರ್ಗದರ್ಶನ ನೀಡುತ್ತದೆ.
ಗುಣಾತ್ಮಕತೆ:
- ಬಿಎಸ್‌ಇನಲ್ಲಿ 7400ಕ್ಕೂ ಹೆಚ್ಚು ಕಂಪನಿಗಳು ಪಟ್ಟಿಗೊಂಡಿವೆ, ಜಾಗತಿಕವಾಗಿ 10ನೇ ಸ್ಥಾನದಲ್ಲಿದೆ.
- ಮಾರುಕಟ್ಟೆ ಬಂಡವಾಳ: ಸುಮಾರು ₹266 ಟ್ರಿಲಿಯನ್.
ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್ (NSE):
ಇತಿಹಾಸ:
- 1992ರಲ್ಲಿ ಸ್ಥಾಪನೆಗೊಂಡ ಎನ್‌ಎಸ್‌ಇ, 1994ರಿಂದ ವಹಿವಾಟು ಆರಂಭಿಸಿತು.
- ಇ-ವಾಣಿಜ್ಯತೆಯ ಆಧುನಿಕ ವ್ಯವಸ್ಥೆಯನ್ನು ಪರಿಚಯಿಸಿದ ಮುಂಚೂಣಿ ಮಾರುಕಟ್ಟೆ.
ನಿಫ್ಟಿ 50 ಮತ್ತು ಇತರ ಸೂಚ್ಯಂಕಗಳು:
- “ನಿಫ್ಟಿ 50” 1995-96ರಲ್ಲಿ ಪರಿಚಯಗೊಂಡಿತು, ಇದು ಶ್ರೇಷ್ಠ 50 ಷೇರುಗಳ ಪಟ್ಟಿ.
- ನಿಫ್ಟಿ ನೆಕ್ಸ್ಟ್ 50, ನಿಫ್ಟಿ ಸ್ಮಾಲ್‌ಕ್ಯಾಪ್ 250 ಮೊದಲಾದ ಪ್ರಮುಖ ಸೂಚ್ಯಂಕಗಳನ್ನು ಹೊಂದಿದೆ.
ಗುಣಾತ್ಮಕತೆ:
- ಸುಮಾರು ₹199 ಟ್ರಿಲಿಯನ್ ಮಾರುಕಟ್ಟೆ ಬಂಡವಾಳ ಹೊಂದಿದ್ದು, 11ನೇ ಸ್ಥಾನದಲ್ಲಿ ಇದೆ.
- 1790 ಕಂಪನಿಗಳು ಪಟ್ಟಿ ಹೊಂದಿವೆ.
ಯಾವದು ಉತ್ತಮ?
ಹೂಡಿಕೆದಾರರು ಯಾವ ಬಂಡವಾಳ ಮಾರುಕಟ್ಟೆಯನ್ನು ಆಯ್ಕೆ ಮಾಡಬೇಕು ಎಂಬುದು ಕಂಪನಿಯ ಪಟ್ಟಿ ಮೇಲೆ ಅವಲಂಬಿತವಾಗಿದೆ. ಹೆಚ್ಚಿನ ಷೇರುಗಳು ಎರಡೂ ಬಂಡವಾಳ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ, ಆಯ್ಕೆ ಸುಲಭವಾಗುತ್ತದೆ. ಆದರೆ ಹೆಚ್ಚು ವಹಿವಾಟು ಆದಷ್ಟು ಲಿಕ್ವಿಡಿಟಿ ದೃಷ್ಟಿಯಿಂದ ಎನ್‌ಎಸ್‌ಇ ಸ್ಪಷ್ಟ ಮುನ್ನಡೆಯಲ್ಲಿದೆ.