Politics
ಯಾರ್ಯಾರನ್ನು ಕೈಬಿಟ್ಟಿದೆ ಮೋದಿ 3.0?
ನವದೆಹಲಿ: ನರೇಂದ್ರ ಮೋದಿಯವರು ಮೂರನೇ ಬಾರಿ ಭಾರತದ ಪ್ರಧಾನಮಂತ್ರಿಯಾಗಿ ನಿನ್ನೆ ಭಾನುವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈಗ ಸರ್ಕಾರದ ಮುಂದೆ ಇರುವಂತಹ ದೊಡ್ಡ ಕೆಲಸ ಸಚಿವಾಲಯಗಳ ಹಂಚಿಕೆ. ಮೋದಿಯವರ 3.೦ ಸರ್ಕಾರ ತನ್ನ ಹಳೆಯ ಸಚಿವ ಸಂಪುಟದಲ್ಲಿದ್ದ ಕೆಲವು ಪ್ರಭಾವಿ ಸಂಸದರ ಹೆಸರನ್ನು ಈ ಬಾರಿ ಕೈಬಿಟ್ಟಿದೆ.
ಹಾಗಾದ್ರೆ ಖಾತೆ ಕಳೆದುಕೊಂಡ ಆ ಸಂಸದರು ಯಾರು?
- ಸ್ಮೃತಿ ಇರಾನಿ – ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ.
- ಅನುರಾಗ್ ಠಾಕೂರ್ – ಮಾಹಿತಿ ಮತ್ತು ಪ್ರಸಾರ ಸಚಿವಾಲಯ.
- ನಾರಾಯಣ್ ರಾಣೆ – ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ.
- ಅರ್ಜುನ್ ಮುಂಡಾ – ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ.
- ಪರ್ಶೋತ್ತಮ್ ರೂಪಾಲಾ – ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ.
- ಮಹೇಂದ್ರ ನಾಥ ಪಾಂಡೆ – ಭಾರೀ ಕೈಗಾರಿಕೆಗಳ ಸಚಿವಾಲಯ.
- ಆರ್.ಕೆ. ಸಿಂಗ್ – ವಿದ್ಯುತ್ ಸಚಿವಾಲಯ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ.
- ಕೈಲಾಶ್ ಚೌಧರಿ – ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವಾಲಯ.
- ಸಂಜೀವ್ ಕುಮಾರ್ ಬಲ್ಯಾನ್ – ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ರಾಜ್ಯ ಸಚಿವಾಲಯ.
- ಫಾಗನ್ ಸಿಂಗ್ ಕುಲಸ್ತೆ – ಗ್ರಾಮೀಣಾಭಿವೃದ್ಧಿ ಮತ್ತು ಉಕ್ಕಿನ ರಾಜ್ಯ ಸಚಿವಾಲಯ.
- ವಿ.ಕೆ. ಸಿಂಗ್ – ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವಾಲಯ.
- ಸಾಧ್ವಿ ನಿರಂಜನ್ ಜ್ಯೋತಿ – ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವಾಲಯ.
- ರಾಜೀವ್ ಚಂದ್ರಶೇಖರ್ – ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವಾಲಯ.
- ವಿ. ಮುರಳೀಧರನ್ – ಸಂಸದೀಯ ವ್ಯವಹಾರಗಳ ರಾಜ್ಯ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ.
- ಮೀನಾಕ್ಷಿ ಲೇಖಕಿ – ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವಾಲಯ.