Sports
ಜಿಂಬಾಬ್ವೆ ಎದುರಿಸಲು ಭಾರತ ತಂಡದಲ್ಲಿ ಯಾರ್ಯಾರು ಇರಲಿದ್ದಾರೆ?

ನವದೆಹಲಿ: ಜುಲೈ 6ರಿಂದ ಪ್ರಾರಂಭ ಆಗುತ್ತಿರುವ ಜಿಂಬಾಬ್ವೆ ಮತ್ತು ಭಾರತದ ನಡುವಿನ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಭಾರತದ ತಂಡದ ಆಟಗಾರರ ಹೆಸರನ್ನು ಬಿಸಿಸಿಐ ಸೂಚಿಸಿದೆ. ಐದು ಟಿ-20 ಸರಣಿಗೆ ಭಾರತದ ಕ್ರಿಕೆಟ್ ತಂಡದ ನಾಯಕನನ್ನಾಗಿ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಉಳಿದ ತಂಡದ ಆಟಗಾರರ ಹೆಸರು ಇಂತಿದೆ. ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ಉಪ ನಾಯಕ), ಧ್ರುವ ಜುರೆಲ್, ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಶ್ನೋಯ್, ಆವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್ ಹಾಗೂ ತುಷಾರ್ ದೇಶಪಾಂಡೆ.
ಜಿಂಬಾಬ್ವೆ ವಿರುದ್ಧ ಐದು ಟಿ-20 ಪಂದ್ಯಗಳನ್ನು ಆಡಲಿದ್ದು, ಜುಲೈ 6,7,10,13, ಹಾಗೂ 14 ರಂದು ನಡೆಯಲಿದೆ.