Politics
ಯಾರಾಗಲಿದ್ದಾರೆ ಒರಿಸ್ಸಾ ಮುಖ್ಯಮಂತ್ರಿ?
ಭುವನೇಶ್ವರ: 2024ರ ವಿಧಾನಸಭಾ ಚುನಾವಣೆ ಒರಿಸ್ಸಾದಲ್ಲಿ ತನ್ನ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಕಳೆದ 24 ವರ್ಷಗಳಿಂದ ಅಧಿಕಾರದಲ್ಲಿದ್ದ ಬೀಜು ಜನತಾದಳ ಪಕ್ಷದ ನಾಯಕ ಶ್ರೀ ನವೀನ್ ಪಟ್ನಾಯಕ್ ಅವರು ನಿನ್ನೆ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ದಶಕಗಳ ನಂತರ ಭಾರತೀಯ ಜನತಾ ಪಕ್ಷವು ಒರಿಸ್ಸಾ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ.
ಪ್ರಸ್ತುತ ಬಿಜೆಪಿಯ ಮುಂದಿರುವುದು ಯಾರಾಗಬೇಕು ಒರಿಸ್ಸಾದ ನೂತನ ಮುಖ್ಯಮಂತ್ರಿ ಎಂಬ ಪ್ರಶ್ನೆ.
ಮುಖ್ಯಮಂತ್ರಿ ಸ್ಥಾನದ ಓಟದಲ್ಲಿ ಈಗಾಗಲೇ ಕೆಲವು ಹೆಸರುಗಳು ಮುಂದಕ್ಕೆ ಬರುತ್ತಿದೆ. ಅವುಗಳೆಂದರೆ:
- ಜುಯಲ್ ಓರಮ್
- ಧರ್ಮೇಂದ್ರ ಪ್ರಧಾನ್
- ಸಂಬಿತ್ ಪಾತ್ರ
- ಬೈಜಯಂತ್ ಜಯ್ ಪಾಂಡ
- ಗಿರೀಶ್ ಚಂದ್ರ ಮುರ್ಮು.
ಪಟ್ಟಿಯಲ್ಲಿರುವ ಎಲ್ಲರೂ ಭಾರತೀಯ ಜನತಾ ಪಕ್ಷದಲ್ಲಿ ಪ್ರಭಾವಿ ರಾಜಕಾರಣಿಗಳಾಗಿದ್ದು, ಇವರುಗಳಲ್ಲಿ ಯಾರು ಮುಖ್ಯಮಂತ್ರಿ ಆಗದಿದ್ದಾರೆ ಎಂಬುದನ್ನು, ರಾಷ್ಟ್ರಮಟ್ಟದ ನಾಯಕರು ನಿಶ್ಚಯಿಸಲಿರುವ ಸಂಭವವಿದೆ.