ಎಲ್ಲರ ಕಣ್ಣು ‘ರಫಾ’ ಮೇಲೆ.
ಗಾಝಾ: #AllEyesOnRafah ಎಂಬ ಘೋಷಣೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿದೆ. ಹಾಗಾದರೆ ಏನಿದು ರಫಾ? ರಫಾ ಎಂಬುದು ಇಸ್ರೇಲ್ ದೇಶದ ಗಡಿ ಪ್ರದೇಶ. ಇದು ಗಾಝಾ ಪಟ್ಟಿಗೆ ಹೊಂದಿಕೊಂಡಿದೆ. ಈ ನಗರದ ಮೇಲೆ ಭಾನುವಾರ ಇಸ್ರೇಲ್ ಸೇನೆಯು ದಾಳಿ ನಡೆಸಿ, ಬರೋಬ್ಬರಿ 45 ಜನ ಸಾರ್ವಜನಿಕರ ಸಾವಿಗೆ ಕಾರಣವಾಗಿದೆ ಎಂದು ಆರೋಪ ಮಾಡಲಾಗುತ್ತಿದೆ. 45 ಜನರಲ್ಲಿ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಇದ್ದಿದ್ದರು ಎಂದು ಹೇಳಲಾಗುತ್ತಿದೆ.
ಈ ದಾಳಿಗೂ ಮುನ್ನ ಹಮಾಸ್ ಉಗ್ರ ಸಂಘಟನೆ, ಇಸ್ರೇಲ್‌ಗೆ ಸಂಬಂಧಿಸಿದ ಟೆಲ್ ಅವಿವ್ ನಗರದ ಮೇಲೆ ಸರಣಿ ರಾಕೆಟ್ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕಾರ ಎಂಬಂತೆ ಇಸ್ರೇಲ್ ಈ ನಿರ್ಧಾರ ತೆಗೆದುಕೊಂಡಿದೆ. ರಫಾ ನಗರದಲ್ಲಿ ಹಮಾಸ್ ಉಗ್ರರ ಅಡುಗು ತಾಣಗಳು ಇದ್ದವು ಎಂಬುದು ಇಸ್ರೇಲ್ ಗುಪ್ತಚರ ಮಾಹಿತಿ.
ರಫಾ ನಗರ ಪ್ಯಾಲೆಸ್ಟೈನ್‌ಗೆ ತೆರಳುವ ಮಾನವೀಯ ಸಹಾಯಗಳು ಪ್ರವೇಶ ಮಾಡುವಂತಹ ಸ್ಥಳವಾಗಿತ್ತು. ಈ ನಗರದ ಮೇಲಿನ ದಾಳಿಯಿಂದ ಪ್ಯಾಲೆಸ್ಟೈನ್ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ. ಈ ದಾಳಿಯಿಂದ ಸಾವಿರಾರು ರಫಾ ನಾಗರೀಕರು ಜೀವ ಉಳಿಸಿಕೊಳ್ಳಲು ಗುಳೆ ಹೋಗುತ್ತಿದ್ದಾರೆ.