ಹುಟ್ಟು ಹಬ್ಬದ ದಿನ ‘ಜೂಟ್’ ಆಗುತ್ತಿರುವ ಕನ್ನಡ ನಟರು; ಕಾರಣವೇನು?
ಬೆಂಗಳೂರು: ಕನ್ನಡ ಚಿತ್ರರಂಗದ ಕೆಲವು ನಾಯಕ ನಟರು ತಮ್ಮ ಹುಟ್ಟುಹಬ್ಬದ ದಿನದಂದು ತಮ್ಮ ಅಭಿಮಾನಿಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಜುಲೈ 02 ಕ್ಕೆ ಹುಟ್ಟು ಹಬ್ಬ ಆಚರಿಸಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್, ಜುಲೈ 04 ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ಪ್ರಜ್ವಲ್ ದೇವರಾಜ್, ಜುಲೈ 06 ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ಲೂಸ್ ಮಾದ ಯೋಗೇಶ್, ಹೀಗೆ ಸಾಲು ಸಾಲು ಕನ್ನಡ ಚಿತ್ರ ನಟರು ಒಬ್ಬರ ನಂತರ ಒಬ್ಬರು ಕೈತಪ್ಪಿಸಿಕೊಳ್ಳುತ್ತಿರುವುದು ಅನುಮಾನ ಹುಟ್ಟಿಸುತ್ತದೆ.
ಈ ನಟರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಾವು ಹುಟ್ಟು ಹಬ್ಬದ ದಿನದಂದು ಮನೆಯಲ್ಲಿ ಇರದ ಕಾರಣ, ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡಿಕೊಳ್ಳಲು ಸಾಧ್ಯವಿರುವುದಿಲ್ಲ. ನಿಮ್ಮ ಪ್ರೀತಿ ಅಭಿಮಾನಕ್ಕೆ ಧನ್ಯವಾದಗಳು ಎಂದು ಹೇಳಿ ಪೋಸ್ಟ್ ಮಾಡುತ್ತಿದ್ದಾರೆ.
ದರ್ಶನ್ ಅರೆಸ್ಟ್ ಆಗಿದ್ದಕ್ಕಾಗಿ ಈ ನಿರ್ಧಾರ ತೆಗೆದುಕೊಂಡರೇ ಸ್ಯಾಂಡಲ್ ವುಡ್ ಸ್ಟಾರ್‌ಗಳು?
ಈಗ ಸದ್ಯ ಈ ಅನುಮಾನ ಕೂಡ ಹುಟ್ಟಿಕೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೋಲಿಸ್ ಅತಿಥಿ ಆಗಿರುವ ಬೆನ್ನಲ್ಲೇ, ಕನ್ನಡ ನಟರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಊಹಾಪೋಹ ಹುಟ್ಟಿದೆ. ಎಲ್ಲೋ ಒಬ್ಬರು ಹೀಗೆ ಮಾಡಿದ್ದರೆ, ಸಾಮಾನ್ಯವಾಗಿ ಗಮನ ನೀಡುತ್ತಿರಲಿಲ್ಲ. ಆದರೆ ಸಾಲು ಸಾಲು ನಟರು ಹೀಗೆ ಮಾಡುತ್ತಿರುವುದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.