CinemaEntertainment
ಕಾಂತಾರ -2 ತಂಡ ಸೇರಲಿದ್ದಾರಾ ಜಯರಾಮ?!
ಬೆಂಗಳೂರು: ಕಾಂತಾರ ಮೊದಲ ಭಾಗದ ಅದ್ಭುತ ಯಶಸ್ಸಿನ ನಂತರ, ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ಅವರು ಕಾಂತಾರ ಎರಡನೇ ಭಾಗದ ಚಿತ್ರೀಕರಣಕ್ಕೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲದೆ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದರ ಮಧ್ಯೆ ಇನ್ನೊಂದು ಸುದ್ದಿ ಈ ಚಿತ್ರದ ಸುತ್ತ ಸುಳಿದಾಡುತ್ತಿದೆ.
ಬಹುಭಾಷಾ ನಟ ಜಯರಾಮ್ ಅವರು ಕಾಂತಾರ -2 ಅಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗಾಳಿಮಾತು ಕೇಳಿ ಬರುತ್ತಿದೆ. ಜಯರಾಮ್ ಅವರು ಶಿವರಾಜ್ ಕುಮಾರ್ ಅವರ ಸದ್ಯದ ಚಿತ್ರ ‘ಘೋಸ್ಟ್’ ನಲ್ಲಿ ಅಭಿನಯಿಸಿದ್ದರು. ಈ ಸುದ್ದಿ ಕೇವಲ ಗಾಳಿಸುದ್ದಿಯೋ ಅಥವಾ ನಿಜವೋ ಎಂಬುದರ ಬಗ್ಗೆ ಚಿತ್ರ ತಂಡವೇ ಹೇಳಬೇಕಿದೆ.
ಕಾಂತಾರ ಮೊದಲ ಭಾಗದ ಅಭೂತಪೂರ್ವ ಗೆಲುವು ದೇಶದಾದ್ಯಂತ ರಿಷಬ್ ಶೆಟ್ಟಿ ಅವರಿ ಹೆಸರನ್ನು ತಂದುಕೊಟ್ಟಿದೆ. ಅವರ ಕಾಂತಾರ ಎರಡನೇ ಭಾಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಮೊದಲ ಭಾಗದಂತೆ ಇದೂ ಸಹ ರೋಮಾಂಚನ ಉಂಟು ಮಾಡಲಿದೆ ಎಂಬುದು ಎಲ್ಲರ ನಂಬಿಕೆ.