Bengaluru
2040ರಲ್ಲಿ ಮುಳುಗಲಿದೆಯೇ ಕರ್ನಾಟಕದ ಕರಾವಳಿ? ವಿಜ್ಞಾನಿಗಳ ಎಚ್ಚರಿಕೆ!

ಮಂಗಳೂರು: ಪಶ್ಚಿಮ ಕರಾವಳಿಯ ಸಮುದ್ರ ಮಟ್ಟದ ಏರಿಕೆ, ಮಂಗಳೂರು ಮತ್ತು ಉಡುಪಿಯಂತಹ ನಗರಗಳಿಗೆ ಅಪಾಯದ ಮುನ್ಸೂಚನೆ ತಟ್ಟುತ್ತಿದೆ. ಇತ್ತೀಚಿನ ಅಧ್ಯಯನ ವರದಿಯ ಪ್ರಕಾರ, 2040ರ ಹೊತ್ತಿಗೆ ಈ ನಗರಗಳ ಶೇಕಡಾ 5ರಷ್ಟು ಭೂಭಾಗವನ್ನು ಸಮುದ್ರ ತನ್ನ ವ್ಯಾಪ್ತಿಗೆ ಸೆಳೆಯಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಇದೇ ಮೊದಲೇ, ಕಡಲಿನ ಅಬ್ಬರದ ಕಾರಣದಿಂದ ಕಡಲತೀರದಲ್ಲಿ ಮನೆಗಳಿಗೆ ನೀರು ನುಗ್ಗುವ ಘಟನೆಗಳು ಹೆಚ್ಚುತ್ತಿವೆ. ಪ್ರತಿ ಮಳೆಗಾಲದಲ್ಲಿ, ಸಮುದ್ರ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಕರಾವಳಿ ಜಿಲ್ಲೆಗಳ ಭೂಭಾಗವನ್ನು ಅಪಾಯದಲ್ಲಿ ನಿಲ್ಲಿಸಿದೆ. ಬೆಂಗಳೂರಿನ ವಿಜ್ಞಾನಿಗಳ ತಂಡ ಈ ಅಧ್ಯಯನ ವರದಿಯನ್ನು ಹೊರಬಿಟ್ಟಿದ್ದು, ಕರಾವಳಿಯ ಜನತೆಗೆ ಮುನ್ನೆಚ್ಚರಿಕೆಯ ಸೂಚನೆ ನೀಡಿದೆ.