Bengaluru
ಮುಂದಿನ 5 ದಿನಗಳಲ್ಲಿ ಕರಾವಳಿಯಲ್ಲಿ ಸಂಭವಿಸಲಿದೆಯೇ ಭಾರೀ ಮಳೆ?!

ಉತ್ತರ ಕನ್ನಡ: ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಜುಲೈ 28 ರಿಂದ 31 ವರೆಗೆ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಪ್ರದೇಶಗಳಿಗೆ ಐಎಂಡಿಯಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಒಳಗೊಂಡಿದೆ.
ಉತ್ತರ ಆಂತರಿಕ ಜಿಲ್ಲೆಗಳಲ್ಲಿ ಜುಲೈ 27 ರಿಂದ 31 ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕ ರಾಜ್ಯದಾದ್ಯಂತ ವ್ಯಾಪಕ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಈಗಾಗಲೇ ಭಾರೀ ಹಾನಿ ಉಂಟು ಮಾಡಿರುವ ಮುಂಗಾರು ಕೆಲವು ದಿನಗಳ ಕಾಲ ತನ್ನ ಆರ್ಭಟಕ್ಕೆ ವಿರಾಮ ತೋರಿತ್ತು, ಆದರೆ ಮುಂದಿನ 5 ದಿನಗಳು ಮುಂಗಾರು ಮತ್ತೆ ವಿಜ್ರಂಭಿಸಲಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.