“ಸುದೀಪ್ ಅವರಿಗೂ ಒಂದು ಮೂವಿ ಮಾಡ್ತೀನಿ.”- ಚಂದ್ರು ಮಾತಿಗೆ ಕಿಚ್ಚ ಸುದೀಪ್ ರಿಯಾಕ್ಷನ್ ಹೇಗಿತ್ತು…?!
ಆರ್.ಚಂದ್ರು ನಮಗೆ ಗೊತ್ತಿರುವ ಹಾಗೆ ಅದ್ಭುತ ನಿರ್ದೇಶಕರು. ಕಳೆದ ವರ್ಷ ಕಬ್ಜ ಸಿನಿಮಾ ನಿರ್ಮಾಣ ಮಾಡಿ, ಪ್ರೊಡ್ಯೂಸರ್ ಆಗಿ ಹೆಜ್ಜೆ ಇಟ್ಟ ಆರ್.ಚಂದ್ರು ಗೆದ್ದು ಬೀಗಿದ್ದರು. ಅದೇ ಖುಷಿಯಲ್ಲಿ ತಮ್ಮ ʼ RC ಸ್ಟುಡಿಯೋʼ ಬ್ಯಾನರ್‌ನ ಅಡಿಯಲ್ಲಿ ಐದು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ರು. ಇದೀಗ ಮೊದಲನೇ ಫಿಲಂ ʼಫಾದರ್ʼ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೈಟಲ್ ಲಾಂಚ್ ಆಗಿದೆ.
ಕಿಚ್ಚ ಸುದೀಪ್ ಅವರ ಕೈಯಲ್ಲಿ ಟೈಟಲ್, ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಆದಷ್ಟು ಬೇಗ ಈ ಸಿನಿಮಾ ಚಿತ್ರಮಂದಿರಕ್ಕೆ ಕಾಲಿಡುವ ಭರವಸೆ ಕೊಟ್ಟಿದೆ. ಇನ್ನು ಈ ಸಿನಿಮಾದಲ್ಲಿ ತಾರಾಬಳಗವನ್ನು ನೋಡೋದಾದ್ರೆ, ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್, ಅಮೃತ ಅಯ್ಯಂಗಾರ್, ನಾಗಭೂಷಣ್ ಸೇರಿ ಇನ್ನು ಅನೇಕ ಕಲಾವಿದರ ದಂಡು ಈ ಚಿತ್ರದಲ್ಲಿದೆ. ಇನ್ನು ತಮಿಳಿನಲ್ಲೂ ಎರಡು ಸಿನಿಮಾ ಮಾಡಿರುವ ರಾಜ್ ಮೋಹನ್, ಫಾದರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ನಿರ್ದೇಶಕರೇ ಹೇಳಿರೋ ಹಾಗೆ ಇದೊಂದು ಎಮೋಷನಲ್ ಡ್ರಾಮಾ ಇರುವ ಕಥೆ.. ಈ ಅದ್ಭುತ ಕಥೆಗೆ ಮಂಜು ಮಂಡ್ವಿ ಡೈಲಾಗ್ ಬರೆದಿದ್ದಾರೆ. ಇನ್ನು ಫಾದರ್ ಚಿತ್ರದ ಎರಡು ಸಾಂಗ್ ಶೂಟಿಂಗ್ ಬಾಕಿ ಇದ್ದು, ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.ಇದೇ ವೇಳೆ ಮಾತನಾಡಿದ ನಿರ್ದೇಶಕರು, ನಾನು ಮಾತು ಕಮ್ಮಿ ಕೆಲಸ ಜಾಸ್ತಿ… ಈ ಸಿನಿಮಾ ಬಂದಮೇಲೆ ಜನರು ನನ್ನ ಸಿನಿಮಾ ಬಗ್ಗೆ ಮಾತಾಡ್ತಾರೆ ಎಂದು ಹೇಳಿದ್ದಾರೆ.
ಇನ್ನು R.ಚಂದ್ರು ಅವರು ನಿರ್ಮಾಣ ಮಾಡಿರೋ ಈ ಫಿಲಂಗೆ, ಸುದೀಪ್ ಅವರು ಖುಷಿ ಇಂದ ಬಂದು ಟೈಟಲ್, ಟೀಸರ್ ರಿಲೀಸ್ ಮಾಡಿದ್ದಾರೆ. ಅಲ್ಲದೇ R.ಚಂದ್ರು ನನ್ನ ಸ್ನೇಹಿತ.. ಯಾವಾಗ ಕರೆದ್ರು ಬರ್ತೀನಿ ಅವರಿಗೆ ಒಳ್ಳೆಯದಾಗಬೇಕು ಎಂದು ಶುಭಾಶಯ ತಿಳಿಸಿದ್ದಾರೆ. ಇತ್ತ ಆರ್.ಚಂದ್ರು ಅವರು ಕೂಡ ಸುದೀಪ್ ಸರ್ ನನಗೆ ತುಂಬಾ ಇಷ್ಟ. ಅವರ ಸಪೋರ್ಟ್ ಯಾವತ್ತೂ ಮರೆಯಲ್ಲ. ಹಾಗೂ ಮುಂದೆ ಅವರಿಗೂ ಒಂದು ಫಿಲಂ ಮಾಡ್ತೀನಿ ಎಂದು ಹೇಳಿದ್ದಾರೆ.
ಇನ್ನು ಫಾದರ್ ಚಿತ್ರದ ಎರಡು ಸಾಂಗ್ ಶೂಟಿಂಗ್ ಬಾಕಿ ಇದ್ದು, ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.