BengaluruTechnology
ವಿಪ್ರೋದ ಸಿಇಒ ಹುದ್ದೆಗೇರಿದ ಶ್ರೀನಿವಾಸ್ ಪಾಲ್ಲಿಯಾ.

ಬೆಂಗಳೂರು: ಟೆಕ್ನಾಲಜಿ, ಕನ್ಸಲ್ಟೆಂಟ್, ಹಾಗೂ ಬಿಸಿನೆಸ್ ಪ್ರೋಸೆಸ್ ಸರ್ವೀಸ್ ಕ್ಷೇತ್ರಗಳ ದೈತ್ಯ ಕಂಪನಿ ವಿಪ್ರೋ ಈಗ ನೂತನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಹಾಗೂ ಮ್ಯಾನೇಜರ್ ಡೈರೆಕ್ಟರ್‌ರನ್ನು ಪಡೆದಿದೆ.
ಶ್ರೀನಿವಾಸ್ ಪಾಲ್ಲಿಯಾ ಅವರೇ ವಿಪ್ರೋ ಕಂಪನಿಯ ನೂತನ ಸಿಇಒ ಹಾಗೂ ಎಮ್‌ಡಿ. ಇವರು ಈ ಕಂಪನಿಯಲ್ಲಿ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಪಾಲ್ಲಿಯಾ ಅವರು 1992ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ತಮ್ಮ ಮಾಸ್ಟರ್ ಆಫ್ ಟೆಕ್ನಾಲಜಿ ಪದವಿಯನ್ನು ಪಡೆದಿದ್ದಾರೆ. ಇವರು ಹಾರ್ವರ್ಡ್ ಬಿಸಿನೆಸ್ ಸ್ಕೂಲಿನ ಲೀಡಿಂಗ್ ಗ್ಲೋಬಲ್ ಬಿಸಿನೆಸ್ ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಮತ್ತು ಮೆಕ್‌ಗಿಲ್ ಎಕ್ಸಿಕ್ಯೂಟಿವ್ ಇನ್ಸ್ಟಿಟ್ಯೂಟ್ ನಲ್ಲಿ ಅಡ್ವಾನ್ಸ್ ಲೀಡರ್ಶಿಪ್ ಪ್ರೋಗ್ರಾಮ್‌ನಲ್ಲಿ ಪದವಿ ಪಡೆದಿದ್ದಾರೆ.