ನವದೆಹಲಿ: ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಒಲಿಂಪಿಕ್ ಪದಕ ವಿಜೇತ ಭಾರತೀಯ ಕುಸ್ತಿಪಟು ಬಜರಂಗ್ ಪುನಿಯಾ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಇವರು ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪಾಲ್ಗೊಂಡು, ಮಹಿಳಾ ಫ್ರೀಸ್ಟೈಲ್ 50 ಕೆಜಿ ವಿಭಾಗದ ಫೈನಲ್‌ಗೆ ತಲುಪಿದ್ದ, ಆದರೆ ತೂಕ 100 ಗ್ರಾಂ ಹೆಚ್ಚು ಇರುವುದರಿಂದ ಚಿನ್ನದ ಪದಕದ ಪಂದ್ಯದಿಂದ ತೀವ್ರ ನಿರಾಸೆ ಅನುಭವಿಸಿ ಪದಕವಿಲ್ಲದೇ ಉಳಿದ ವಿನೇಶ್ ಫೋಗಟ್ ಅವರನ್ನು ಬರಮಾಡಿಕೊಳ್ಳುತ್ತಿದ್ದರು.
ಪುನಿಯಾ ಅವರು, ವೀನೇಶ್ ಅವರನ್ನು ಸ್ವಾಗತಿಸಲು ಹೋಗಿ, ಅಜಾಗರೂಕತೆಯಿಂದ ‘ರಾಷ್ಟ್ರಧ್ವಜ’ದ ಪೋಸ್ಟರ್ ಮೇಲೆ ನಿಂತಿರುವುದು ಮಾಧ್ಯಮಗಳಲ್ಲಿ ಹರಿದಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ.
ವಿನೇಶ್ ಫೋಗಟ್ ಫೈನಲ್ ಮುನ್ನ, ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ಮತ್ತು ನಂಬರ್.1 ಸೀಡ್ ಯುಯಿ ಸುಸಾಕಿಯನ್ನು ಸೋಲಿಸಿ ನಿರೀಕ್ಷೆಗಳನ್ನೆಲ್ಲ ಮೀರಿ ಗೆಲುವು ಸಾಧಿಸಿದ್ದರು. ಚಿನ್ನದ ಪದಕ ಗಳಿಸಲು ಸಿದ್ಧವಾಗಿದ್ದಾಗ, ತೂಕ ಮೀರಿದ ಕಾರಣ ದುರಾದೃಷ್ಟಕ್ಕೆ ಗುರಿಯಾದರು. ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ (CAS) ಅವರ ಜಂಟಿ ಬೆಳ್ಳಿ ಪದಕಕ್ಕಾಗಿ ಮಾಡಿದ ಮನವಿಯನ್ನು ತಿರಸ್ಕರಿಸಿದರೂ, ಪ್ಯಾರಿಸ್‌ನಿಂದ ದೆಹಲಿಗೆ ವಾಪಸ್ಸಾದಾಗ, ಇವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ವಿನೇಶ್ ಅವರನ್ನು ಸ್ವಾಗತಿಸಲು ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸಹ ಆಗಮಿಸಿದ್ದರು. ಆದರೆ, ಬಜರಂಗ್ ಅವರು, ಅಜಾಗರೂಕತೆಯಿಂದ ತ್ರಿವರ್ಣ ಧ್ವಜದ ಪೋಸ್ಟರ್ ಮೇಲೆ ನಿಂತಿದ್ದು ದೇಶಭಕ್ತರು ಸೇರಿದಂತೆ ಇತರರಿಂದ ತೀವ್ರ ಟೀಕೆ ಎದುರಿಸಬೇಕಾಯಿತು.