ಎನ್-1 ಕ್ರಿಕೆಟ್ ಅಕಾಡೆಮಿಯಿಂದ ‘WWCL’: ಯಾರ್ಯಾರು ಸ್ಟಾರ್ ನಟಿಯರು ಯಾವ್ಯಾವ ಟೀಮಿಗೆ..?!
ಬೆಂಗಳೂರು: ಎನ್-1 ಕ್ರಿಕೆಟ್ ಅಕಾಡೆಮಿ ಇದೀಗ ಮಹಿಳಾ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಲು ಸಜ್ಜಾಗಿದೆ. ವಿಂಡ್ ಬಾಲ್ ಕ್ರಿಕೆಟ್ ಲೀಗ್ (WWCL) ಎಂಬ ಹೆಸರಿನಲ್ಲಿ ನೂತನ ಮಹಿಳಾ ಕ್ರಿಕೆಟ್ ಟೂರ್ನಿ ಈಗ ಅಧಿಕೃತವಾಗಿ ಪ್ರಾರಂಭವಾಗಿದೆ. ಈ ಬೃಹತ್ ಕ್ರಿಕೆಟ್ ಉತ್ಸವದ ಲೋಗೋ ಲಾಂಚ್ ಕಾರ್ಯಕ್ರಮವು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಿರ್ಮಾಪಕ ಭಾಮ ಹರೀಶ್ ಅವರ ಸಾನ್ನಿಧ್ಯದಲ್ಲಿ ನಡೆದಿದ್ದು, ಎಲ್ಲಾ ತಂಡಗಳಿಗೆ ಶುಭಾಶಯಗಳೊಂದಿಗೆ ಲೀಗ್‌ಗೆ ಉದ್ಘಾಟನೆ ನೀಡಿದೆ.
ಎನ್-1 ಅಕಾಡೆಮಿಯ ಹೊಸ ಶಕ್ತಿಯಾಗಿದೆ WWCL:
ಎನ್-1 ಅಕಾಡೆಮಿಯು ಇದಕ್ಕೂ ಮೊದಲು ಟೆಲಿವಿಷನ್ ಪ್ರೀಮಿಯರ್ ಲೀಗ್ (TPL) ಮತ್ತು IPT12 ಅನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಈಗ ಮಹಿಳೆಯರಿಗಾಗಿ ಸುನೀಲ್ ಕುಮಾರ್ ಬಿ.ಆರ್ ನೇತೃತ್ವದಲ್ಲಿ ಈ ಹೊಸ ಪ್ರಯತ್ನ ಮಾಡಿದೆ. 98 ನಟಿಯರು ಪಾಲ್ಗೊಳ್ಳಲಿರುವ ಈ ಟೂರ್ನಿಯಲ್ಲಿ ಹರಾಜು ಪ್ರಕ್ರಿಯೆ ಕೂಡಾ ಅದ್ದೂರಿಯಾಗಿ ನಡೆಯಿತು.
ಟೀಮ್ ಜೆರ್ಸಿ ಲಾಂಚ್ ಶೀಘ್ರದಲ್ಲೇ: ಈ ತಿಂಗಳ ಕೊನೆಯೊಳಗೆ ತಂಡಗಳ ಜೆರ್ಸಿ ಲಾಂಚ್ ನಡೆಯಲಿದ್ದು, ನವೆಂಬರ್‌ನಲ್ಲಿ ಬಹುನಿರೀಕ್ಷಿತ WWCL ಪಂದ್ಯಗಳು ಪ್ರಾರಂಭವಾಗಲಿವೆ. ಈ ಮೊದಲೇ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಬಾರಿ ಒಟ್ಟು ಏಳು ತಂಡಗಳು ಟೂರ್ನಿಯ ಕಣಕ್ಕಿಳಿಯುತ್ತಿವೆ.
ತಂಡಗಳ ಮಾಹಿತಿ:
- ಎವಿಆರ್ ಟಸ್ಕರ್ಸ್ – ಮಾಲೀಕ: ಅರವಿಂದ್, ಕೋಚ್: ವೆಂಕಟೇಶ್ ರೆಡ್ಡಿ, ನಾಯಕಿ: ಆರೋಹಿ ನಾರಾಯಣ್
- ಎಂಆರ್ ಫ್ಯಾಂಥರ್ಸ್ – ಮಾಲೀಕ: ಮಿಥುನ್ ರೆಡ್ಡಿ, ನಾಯಕಿ: ಮಲೈಕಾ ವಸೂಪಾಲ್
- ಬುಲ್ ಸ್ಕ್ವಾಡ್ – ಮಾಲೀಕ: ಮೋನಿಷ್, ನಾಯಕಿ: ಶಾನ್ವಿ ಶ್ರೀವಾಸ್ತವ
- ವಿನ್ ಟೈಮ್ ರಾಕರ್ಸ್ – ಮಾಲೀಕ: ಅನಿಲ್ ಕುಮಾರ್ ಬಿ.ಆರ್, ನಾಯಕಿ: ಬೃಂದಾ ಆಚಾರ್ಯ
- ಮಂಜು 11 – ಮಾಲೀಕ: ಮಂಜುನಾಥ್ – ನಾಗಯ್ಯ, ಯಶ ಶಿವಕುಮಾರ್
- ಬಯೋಟಾಪ್ ಲೈಫ್ ಸೇವಿಯರ್ಸ್ – ಮಾಲೀಕ: ಪ್ರಸನ್ನ, ನಾಯಕ: ಅಪೂರ್ವ
- ಖುಷಿ 11 – ನಾಯಕಿ: ಭೂಮಿ ಶೆಟ್ಟಿ
ಮಹಿಳೆಯರು ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಮಟ್ಟವನ್ನು ತಲುಪಲು ಸಜ್ಜಾಗಿದ್ದಾರೆ. ಈ WWCL ಮೂಲಕ ಮಹಿಳೆಯರು “ನಾವೂ ಆಟಗಾರ್ತಿಯೇ!” ಎನ್ನುವ ಬೃಹತ್ ಸಂದೇಶವನ್ನು ನೀಡಲು ಸಜ್ಜಾಗಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಕೌತುಕವನ್ನು ಮೂಡಿಸಿದೆ. ಇಷ್ಟು ದಿನಗಳಲ್ಲಿ ಪುರುಷರಿಗಾಗಿದ್ದ ಕ್ರಿಕೆಟ್ ಲೀಗ್‌ಗಳಲ್ಲಿ ಚಿಯರ್ ಮಾಡುತ್ತಿದ್ದ ಸ್ಟಾರ್ ಬ್ರಾಂಡ್ ಅಂಬಾಸಿಡರ್‌ಗಳು, ಇದೀಗ ತಮ್ಮ ತಂಡಗಳಿಗೆ ಬೆಂಬಲ ವ್ಯಕ್ತಪಡಿಸೋಣ ಎಂಬ ಸ್ಫೂರ್ತಿಯಿಂದ ಕ್ರಿಕೆಟ್ ಅಂಗಳಕ್ಕೇ ಬರಲು ನಿರ್ಧರಿಸಿದ್ದಾರೆ.