CinemaEntertainment
ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಯಶ್ ಮತ್ತು ಶಿವಣ್ಣ…?!
ಬೆಂಗಳೂರು: ‘ಕೆಜಿಎಫ್’ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಎರಡೂ ಸ್ಟಾರ್‌ಗಳು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಿನಿಮಾ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಕಾರ್ತಿಕ್ ಅದ್ವೈತ್ ನಿರ್ದೇಶನದ ಹೊಸ ಚಿತ್ರದ ಸೆಟ್‌ನಲ್ಲಿ ಶಿವಣ್ಣ ಮತ್ತು ಯಶ್ ಇಬ್ಬರೂ ಭೇಟಿಯಾಗಿದ್ದಾರೆ.
ಈ ಸಂಧರ್ಭದಲ್ಲಿ, ಯಶ್ ಮತ್ತು ಶಿವರಾಜ್‌ಕುಮಾರ್ ಅವರು ಚಿತ್ರದಲ್ಲಿ ಹೇಗೆ ಸೇರಿಕೊಂಡಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹುಟ್ಟಿಸಿದ್ದು, ಈ ಜೋಡಿ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಚರ್ಚೆ ಮತ್ತೆ ತೀವ್ರಗೊಂಡಿದೆ.
ಯಶ್, ‘ಕೆಜಿಎಫ್’ ಚಿತ್ರಗಳ ಮೂಲಕ ಭಾರತದಾದ್ಯಾಂತ ಪ್ರಖ್ಯಾತರಾಗಿದ್ದರೆ, ಶಿವರಾಜ್‌ಕುಮಾರ್ ಅವರ ಬಹುಮುಖ ಪ್ರತಿಭೆಯನ್ನು ಎಲ್ಲರೂ ಮೆಚ್ಚಿದ್ದಾರೆ. ಇವರು ಇಬ್ಬರೂ ಒಂದೇ ಚಿತ್ರದಲ್ಲಿ ಸೇರಿದ್ದರೆ, ಅದು ಕನ್ನಡ ಚಿತ್ರರಂಗಕ್ಕೆ ಅತಿದೊಡ್ಡ ಉಡುಗೊರೆಯಾಗಲಿದೆ.