Alma Corner
ಯಡಿಯೂರಪ್ಪ ಮತ್ತು ಅವರ ಮಗನ ಮೇಲೆ ನ್ಯೂ ಬಾಂಬ್ ಹಾಕಿದ ಯತ್ನಾಳ..

ಬಸವನಗೌಡ ಪಾಟೀಲ್ ಯತ್ನಾಳ ಯಡಿಯೂರಪ್ಪ ಮತ್ತು ಅವರ ಮಗ ಲಿಂಗಾಯತರೆ ಅಲ್ಲ ಎಂದು ಹೇಳಿದಾರೆ. ಇಂದು ಬೆಳಿಗ್ಗೆ ಮಾದ್ಯಮದೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪನ ಹಿಂದೆ ಯಾವ ಲಿಂಗಾಯತ ಮತಗಳು ಇಲ್ಲ ಯಡಿಯೂರಪ್ಪ ದುಡ್ಡುಕೊಟ್ಟು ಜನಗಳನ್ನ ಕರೆಸುತ್ತಾನೆ.

ಅಪ್ಪಾ ಮಗನ ಹಿಂದೆ ಯಾವ ಲಿಂಗಾಯತ ಸಮುದಾಯದ ಸ್ವಾಮಿಗಳು ಇಲ್ಲ ಅವನ ಜೊತೆ ಸೂಟ್ಕೇಸ್ ಸ್ವಾಮಿಗಳಿದ್ದಾರೆ. ಐದುಸಾವಿರದ ಒಂದು ರುಪಾಯಿ ಡ್ರೈಫ್ರೂಟ್ಸ ಕೊಟ್ರೆ ಸಾಕು ಯಾರ ಬೇಕಾದರು ಸ್ವಾಮಿಗಳು ಮಠಾಧೀಶರಾಗಿ ಅವರ ಹಿಂದೆ ಬರ್ತಾರೆ ಎಂದು ಹೇಳಿದ್ದಾರೆ.

“ಬೇಕಾದರೆ ಅವರ ಊರಿಗೆ ಮಾದ್ಯಮದವರು ಹೋಗಿ ಕೇಳಿ ಅವರು ಲಿಂಗಾಯತರೋ ಅಲ್ಲವೋ ಎಂಬುದು ತಿಳಿಯುತ್ತೆ”. ಅವರು ಯಾವ ಸಮಾವೇಶ ಮಾಡ್ತಾರೊ ಮಾಡಿಲಿ ಅವರು ಮಾಡಿದ ಹತ್ತು ದಿವಸದ ಒಳಗಡೆ ನಾವು ಮಾಡ್ತೆವೇ, ನೋಡೊಣ ಯಾರ ಹಿಂದೆ ಲಿಂಗಾಯತರು ಇದಾರೆ ಎಂದು ಹೇಳಿದರು.
ಮಹಾದೇವ ದಿಗ್ಗಾಂವಕರ್
ಆಲ್ಮಾ ಮಿಡಿಯಾ ಸ್ಕೂಲ್ ವಿಧ್ಯಾರ್ಥಿ