ಶ್ರೀನಗರ: 2024ರ ಅಂತರಾಷ್ಟ್ರೀಯ ಯೋಗ ದಿನ ಭಾರತದಲ್ಲಿ ಕಣಿವೆ ರಾಜ್ಯವಾಗ ಜಮ್ಮು ಕಾಶ್ಮೀರದ ದಾಳ್ ಸರೋವರದ ದಡದ ಮೇಲೆ ನಡೆಯಿತು. ಈ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿಗಳಾದಂತಹ ನರೇಂದ್ರ ಮೋದಿಯವರು ಯೋಗಾಸನಗಳನ್ನು ಮಾಡುವ ಮೂಲಕ, ಯೋಗದ ಅಗತ್ಯವನ್ನು ಜಗತ್ತಿಗೆ ಸಾರಿದರು.
ಈ ಬಾರಿಯ ಯೋಗ ದಿನವೂ 10ನೇ ಅಂತರಾಷ್ಟ್ರೀಯ ಯೋಗ ದಿನವಾಗಿದೆ. ಇದು ಮೊದಲ ಬಾರಿಗೆ 2015ರಲ್ಲಿ ಪ್ರಾರಂಭವಾಗಿತ್ತು. ನರೇಂದ್ರ ಮೋದಿ ಅವರು 2014ರಲ್ಲಿ ವಿಶ್ವಸಂಸ್ಥೆಗೆ ಅಂತರಾಷ್ಟ್ರೀಯ ಯೋಗ ದಿನದ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. ಡಿಸೆಂಬರ್ 11, 2014ರಲ್ಲಿ ವಿಶ್ವಸಂಸ್ಥೆಯು ಇದಕ್ಕೆ ಒಪ್ಪಿಗೆಯನ್ನು ಸೂಚಿಸಿತ್ತು.
2024ರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಧ್ಯೇಯ ವಾಕ್ಯ, ‘ನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗ’ ಎಂಬ ಥೀಮ್‌ನ್ನು ಹೊಂದಿದ್ದಾರೆ.