ಫೆಬ್ರವರಿ 02ರಂದು ವಿಜಯನಗರ ಜಿಲ್ಲೆಯ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯ ಉದ್ಘಾಟನೆಯ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರ್ಚಕರು ನೀಡಿದ ಕುಂಕುಮವನ್ನು ಧರಿಸಲು ನಿರಾಕರಿಸಿದ್ದರು. ಅವರ ಈ ನಡೆಗೆ ಬಿಜೆಪಿ ಸೇರಿ ಅನೇಕ ಹಿಂದೂಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಇದರ ಕುರಿತು ಹೇಳಿಕೆ ನೀಡಿದ ಮಾಜಿ ಶಾಸಕರಾದ ಸಿ.ಟಿ. ರವಿ ” ಕುಂಕುಮ ಬೇಡ ಎನ್ನುವ ಇವರು ಹಿಂದೂನಾ?” ಎಂದು ಸಿದ್ದರಾಮಯ್ಯರವರ ವಿರುದ್ಧ ಕಿಡಿಕಾರಿದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಕಾಂಗ್ರೆಸ್ ” ಕೆಲವರು ಕುಂಕುಮ, ಕೆಲವರು ವಿಭೂತಿ, ಕೆಲವರು ಅಡ್ಡ ನಾಮ, ಕೆಲವರು ಉದ್ದ ನಾಮ, ಕೆಲವರು ಗಂಧ ಹಾಕಿಕೊಳ್ಳುತ್ತಾರೆ, ಇನ್ನೂ ಕೆಲವರು ಹಾಕಿಕೊಳ್ಳದೆಯೂ ಇರುತ್ತಾರೆ,
ಅದು ಅವರವರ ವ್ಯಕ್ತಿಗತ ಆಯ್ಕೆ, ಸ್ವತಂತ್ರ..
ನೀವು ಬೇಕಿದ್ದರೆ ಕುಂಕುಮವಷ್ಟೇ ಅಲ್ಲ, ಕೈಬಳೆ, ಕಿವಿಯೋಲೆ, ಮೂಗುಬೊಟ್ಟು, ಡಾಬು, ವಂಕಿ, ಬೈತಲೆ ಬೊಟ್ಟು ಯಾವುದನ್ನು ಬೇಕಿದ್ದರೂ ಹಾಕಿಕೊಳ್ಳಿ, ಅದು ನಿಮ್ಮ ಸ್ವತಂತ್ರ…” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸಿ.ಟಿ. ರವಿ ಅವರಿಗೆ ಹೇಳಿದ್ದಾರೆ.
ಕಾಂಗ್ರೆಸ್ ಹೇಳಿದ ಕೈಬಳೆ, ಡಾಬು, ಬೈತಲೆ ಬೊಟ್ಟು, ಇತ್ಯಾದಿ, ಒಂದು ಹೆಣ್ಣು ಬಳಸುವಂತಹ ವಸ್ತುಗಳಾಗಿವೆ. ಮಾಜಿ ಶಾಸಕ ಸಿ.ಟಿ. ರವಿ ಅವರಿಗೆ ಇವುಗಳನ್ನು ನೀವು ಧರಿಸಬಹುದು ಎಂಬ ಹೇಳಿಕೆ ಎಷ್ಟು ಸರಿ ಎಂಬುದೇ ಈಗ ಪ್ರಶ್ನೆ. ಪ್ರತ್ಯುತ್ತರ ನೀಡುವ ಬರದಲ್ಲಿ ಹೆಣ್ಣಿನ ಗೌರವದ ಸಂಕೇತಗಳ ಕುರಿತು ಲೇವಡಿ ಮಾಡಿದರೇ? ಈ ರೀತಿಯ ಹೇಳಿಕೆಗಳು ಕೇವಲ ಒಂದು ಕೋಮಿಗಷ್ಟೇ ಸೀಮಿತವೇ? ಎಂಬುದು ಜನರ ಪ್ರಶ್ನೆ.