Alma CornerBengaluruEducation

2 ದಿನಗಳಲ್ಲಿ ನೀವಾಗಬಹುದು ಅದ್ಬುತ ಭಾಷಣಕಾರ: ಖುದ್ದು “ಗೌರೀಶ್ ಅಕ್ಕಿ” ಅವರಿಂದಲೇ ಕಲಿಯಿರಿ ಮಾತುಗಾರಿಕೆಯ ತಂತ್ರಗಳನ್ನು..!

ಬೆಂಗಳೂರು: ಭಾಷಣಕಲೆ ಮತ್ತು ಮಾಧ್ಯಮ ನಿರ್ವಹಣೆಯಲ್ಲಿ ನಿಪುಣರಾಗುವ ಆಸೆ ಹೊಂದಿರುವ ಎಲ್ಲರಿಗೂ ‘ಅಲ್ಮಾ ಮೀಡಿಯಾ ಸ್ಕೂಲ್’ ಒಂದು ಸ್ಪೆಷಲ್ ಆಫರ್ ನೀಡುತ್ತಿದೆ! ಅದುವೇ, ಇದೇ ನವೆಂಬರ್ 23 ಮತ್ತು 24ರಂದು ನಡೆಯಲಿರುವ ‘ಭಾಷಣ ಕಲೆ ಮತ್ತು ಮಾಧ್ಯಮ ನಿರ್ವಹಣೆ’ (Public Speaking and Media Management) ತರಬೇತಿ ಕಾರ್ಯಾಗಾರ. ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಉತ್ಸಾಹಿ ತಜ್ಞರು ಭಾಷಣ, ಆಕರ್ಷಕ ಸಂವಹನ, ಮತ್ತು ಮಾಧ್ಯಮದ ಕುರಿತಾದ ಸವಾಲುಗಳನ್ನು ವೃತ್ತಿಪರವಾಗಿ ಎದುರಿಸಲು ಬೇಕಾದ ಎಲ್ಲಾ ಕೌಶಲಗಳನ್ನು ನಿಮಗೆ ಮನದಟ್ಟು ಮಾಡುತ್ತಾರೆ.

ಯಾರು ಈ ಕಾರ್ಯಗಾರದ ಮಾರ್ಗದರ್ಶಕರು?

ರಾಜ್ಯದ ಹೆಸರಾಂತ ಪತ್ರಕರ್ತರು ಮತ್ತು ನಿರೂಪಕರಾಗಿ ಅಪಾರ ಅನುಭವ ಹೊಂದಿರುವ ಶ್ರೀ. ಗೌರೀಶ್ ಅಕ್ಕಿ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಕಾರ್ಯಾಗಾರವು ವೃತ್ತಿಪರ ಭಾಷಣಕಲೆಗಾರರಾಗಲು ಬಯಸುವವರಿಗೆ ಉತ್ತಮ ಸ್ಥಳವನ್ನು ನೀಡುತ್ತಿದೆ. ಗೌರೀಶ್ ಅಕ್ಕಿಯವರ ಅಗಾಧ ಅನುಭವ ನಿಮ್ಮನ್ನು, ಪ್ರಾಯೋಗಿಕ ತರಬೇತಿ ಮೂಲಕ ಆನ್-ಕ್ಯಾಮೆರಾ ನಿರ್ವಹಣೆ, ಸಂದರ್ಶನ ನಿರ್ವಹಣೆ, ಮಾತುಗಾರಿಕೆ ತಂತ್ರ ಇತ್ಯಾದಿಗಳನ್ನು ಮನಸ್ಸಿನಲ್ಲಿ ಬೇರೂರುವಂತೆ ಮಾಡುತ್ತದೆ.

ಎಲ್ಲರಿಗೂ ಲಭ್ಯವಿರುವ ಈ ಪ್ರಾಯೋಗಿಕ ತರಬೇತಿ ನಿಮಗೇನು ನೀಡುತ್ತದೆ?

2 ದಿನಗಳ ಪ್ರಾಯೋಗಿಕ ತರಬೇತಿಯಲ್ಲಿ ನೀವು ಕಲಿಯುವ ವಿಷಯಗಳು:

  • ಪರಿಣಾಮಕಾರಿ ಭಾಷಣ ಕಲೆ: ನಿಮ್ಮ ಮಾತುಗಳಿಗೆ ಮೋಡಿ ಮಾಡಿ ಪ್ರೇಕ್ಷಕರನ್ನು ನಿಮ್ಮತ್ತ ಸೆಳೆಯುವ ಕಲೆಯನ್ನು ಕಲಿಯಿರಿ.
  • ಮಾಧ್ಯಮ ಸಂವಹನ: ನಿಮ್ಮ ಸಂದೇಶವನ್ನು ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಲು ಸಹಾಯ ಮಾಡುವ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಿ.
  • ನೆಟ್‌ವರ್ಕಿಂಗ್ ಮತ್ತು ಸಹಯೋಗ: ಹೊಸ ಜನರನ್ನು ಭೇಟಿಯಾಗಲು ಮತ್ತು ನಿಮ್ಮ ವೃತ್ತಿಜೀವನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಕೌಶಲಗಳನ್ನು ಕಲಿಯಿರಿ.
  • ಆಂಗಿಕ ಭಾಷಾಭಿವೃದ್ಧಿ: ಆಂಗಿಕ ಭಾಷೆ ಮತ್ತು ಸಂವಹನ ಶೈಲಿಯನ್ನು ಸುಧಾರಿಸಿಕೊಂಡು ಇತರರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಿ.
  • ರಿಯಲ್ ಟೈಮ್ ಪ್ರಾಕ್ಟೀಸ್: ತರಗತಿಯಲ್ಲಿ ನೇರವಾಗಿ ಅಭ್ಯಾಸ ಮಾಡುವ ಮೂಲಕ ನಿಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ.

ಇಲ್ಲಿದೆ ನಿಮ್ಮ ಅವಕಾಶ – ಕೇವಲ ನೋಡುವುದಷ್ಟೇ ಅಲ್ಲ, ಈಗಲೇ ನೊಂದಣಿ ಮಾಡಿಕೊಳ್ಳಿ!

ಈ ಮಹತ್ತರ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು, ನೀವು ( https://forms.gle/SEjPT5d5boWRwp629 ) ಗೂಗಲ್ ಫಾರ್ಮ್‌ನಲ್ಲಿ ನೊಂದಾಯಿಸಬಹುದು.

ಮಾಹಿತಿಗಾಗಿ ಸಂಪರ್ಕಿಸಿ:

ನಿಮ್ಮ ಯಾವುದೇ ಪ್ರಶ್ನೆಗಳಿಗೂ ಈ ಸಂಖ್ಯೆಗೆ ಕರೆಮಾಡಿ: 74069 46667 / 74069 46668

ಕಾರ್ಯಾಗಾರ ನಡೆಯುವ ಸ್ಥಳ: #71/2, ಜಾರಗನಹಳ್ಳಿ ಶಿವಶಂಕರ ಕಾಂಪ್ಲೆಕ್ಸ್, ಜೆ.ಪಿ.ನಗರ, 6ನೇ ಹಂತ, ಕನಕಪುರ ಮುಖ್ಯರಸ್ತೆ, ಮೆಟ್ರೋ ಪಿಲ್ಲರ್ ನಂ:75, ಬೆಂಗಳೂರು-78.

ಸೂಚನೆ: “ಸೀಮಿತ ಸೀಟುಗಳಷ್ಟೇ ಲಭ್ಯವಿರುತ್ತದೆ”

ಅರ್ಥಪೂರ್ಣ ತರಬೇತಿ, ವೃತ್ತಿಪರ ಮಾರ್ಗದರ್ಶನ, ಮತ್ತು ಹೊಸದನ್ನು ಕಲಿಯುವ ಅಮೂಲ್ಯ ಅವಕಾಶ – ಇವೆಲ್ಲವನ್ನು ಒಟ್ಟಿಗೆ ಅಲ್ಮಾ ಮೀಡಿಯಾ ಸ್ಕೂಲ್ ನಿಮಗೆ ನೀಡುತ್ತಿದೆ. ಮಿಸ್ ಮಾಡಿಕೊಳ್ಳಬೇಡಿ!

Show More

Leave a Reply

Your email address will not be published. Required fields are marked *

Related Articles

Back to top button