India
ಬೀಜಿಂಗ್ ಔಟ್! ಈಗ ಏಷ್ಯಾದಲ್ಲೇ ಅತಿ ಹೆಚ್ಚು ಶ್ರೀಮಂತರನ್ನುಹೊಂದಿದ ನಗರ ಮುಂಬೈ.
ಭಾರತ: ದೇಶದ ಹಣಕಾಸಿನ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮುಂಬೈ ನಗರ ತನ್ನ ಶ್ರೀಮಂತರ ಪಟ್ಟಿಯಿಂದ ಚೀನಾದ ಬೀಜಿಂಗ್ ನಗರವನ್ನು ಕೂಡ ಹಿಂದೆ ಹಾಕಿ ಏಷ್ಯಾದ ಅತಿ ಹೆಚ್ಚು ಶ್ರೀಮಂತರನ್ನು ಹೊಂದಿರುವ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ.
ಹುರುನ್ ಸಂಸ್ಥೆ ಬಿಡುಗಡೆಗೊಳಿಸಿದ 2024ರ ‘ಹುರುನ್ ಜಾಗತಿಕ ಶ್ರೀಮಂತರ ವರದಿ’ಯಲ್ಲಿ ಮುಂಬೈ ನಗರ ಮೂರನೇ ಸ್ಥಾನವನ್ನು ಪಡೆದು ಬೀಜಿಂಗ್ ನಗರವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದೆ. ಮುಂಬೈ ನಗರ ಒಟ್ಟು 92 ಬಿಲೇನಿಯರ್‌ಗಳನ್ನು ಹೊಂದಿದೆ. 2023 ರಿಂದ 2024ರವರೆಗೆ 26 ಹೊಸ ಬಿಲೇನಿಯರ್‌ಗಳು ಈ ಪಟ್ಟಿಯನ್ನು ಸೇರಿದ್ದಾರೆ.
ಈ ವರದಿಯಲ್ಲಿ ನವದೆಹಲಿಯು ಕೂಡ 9ನೇ ಸ್ಥಾನ ಪಡೆದಿದೆ. ನವದೆಹಲಿಯಲ್ಲಿ ಪ್ರಸ್ತುತ 57 ಬಿಲೇನಿಯರ್‌ಗಳಿದ್ದು, ಹಿಂದಿನ ವರ್ಷದಿಂದ ಇಲ್ಲಿಯತನಕ 18 ಜನ ಬಿಲೇನಿಯರ್‌ಗಳ ಸಂಖ್ಯೆ ಹೆಚ್ಚಾಗಿದೆ.