ಗ್ಯಾನವಾಪಿ ಮಸೀದಿಯಡಿಯಲ್ಲಿ ಪೂಜೆ. ವಿರೋಧವನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್.
ನವದೆಹಲಿ: ಗ್ಯಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಇರುವ ‘ವ್ಯಾಸ ತೆಹಖಾನಾ’ದಲ್ಲಿ ಪೂಜೆ ಸಲ್ಲಿಸಬಹುದು ಎಂದು, ಅಲಹಾಬಾದ್ ಉಚ್ಚ ನ್ಯಾಯಾಲಯ ಅನುಮತಿ ನೀಡಿತ್ತು. ಇದರ ವಿರುದ್ಧ ಮಸೀದಿಯ ಸಮಿತಿಯು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಆದರೆ ಇಂದು ಮತ್ತೆ ಸುಪ್ರೀಂಕೋರ್ಟ್ ಪೂಜೆ ನಿಲ್ಲಿಸಲು ಕೋರಿದ ಮಸೀದಿಯ ಸಮಿತಿಯ ಅರ್ಜಿಯನ್ನು ತಿರಸ್ಕರಿಸಿದೆ. ಈ ಮೂಲಕ ದೇವಾಲಯದ ಪರ ವಾದಕ್ಕೆ ಇನ್ನೊಂದು ಜಯ ಸಿಕ್ಕಿದೆ. ಸುಪ್ರೀಂಕೋರ್ಟ್ ‘ಸ್ಟೇಟಸ್ ಕ್ಯೋ’ ಆದೇಶವನ್ನು ಕಾಯ್ದುಕೊಂಡಿದೆ.
ಈ ಹಿಂದೆ ಭಾರತದ ಪುರಾತತ್ವ ಇಲಾಖೆಯು ನಡೆಸಿದ ಸಂಶೋಧನೆ ಪ್ರಕಾರ, ಗ್ಯಾನವಾಪಿ ಮಸೀದಿಯಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಶಿವಲಿಂಗಗಳು, ಹನುಮಂತ ಹಾಗೆಯೇ ಇನ್ನಿತರ ಹಿಂದೂ ದೇವತೆಗಳ ಮೂರ್ತಿಗಳು ದೊರೆತಿವೆ ಎನ್ನಲಾಗಿದೆ.
ಗ್ಯಾನವಾಪಿ ಮಸೀದಿಯ ಕುರಿತು ವಾರಣಾಸಿಯ ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪಿನ ಮೇಲೆ, ನೆಲಮಾಳಿಗೆಯಲ್ಲಿ ಇರುವ ವ್ಯಾಸ ತೆಹಖಾನಾವನ್ನು ಹಿಂದೂಗಳಿಗೆ ಪೂಜೆ ಮಾಡಲು ಅನುವು ಮಾಡಿಕೊಡಲಾಗಿತ್ತು. ಈ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಸಹ ಎತ್ತಿ ಹಿಡಿದಿತ್ತು. ಈಗ ಸುಪ್ರೀಂಕೋರ್ಟ್ ಕೂಡ ಮಸೀದಿಯ ವಾದವನ್ನು ತಿರಸ್ಕರಿಸಿರುವುದು, ಹಿಂದೂ ಪರ ವಾದಿಗಳಿಗೆ ಸತತ ಮೂರು ನ್ಯಾಯಾಲಯಗಳಲ್ಲಿ ಗೆಲುವು ಸಾಧಿಸಿದಂತಾಗಿದೆ.